"ಕಷ್ಟಪಟ್ಟು ದುಡಿ ಕೈಲಾದಷ್ಟು ಅನುಭವಿಸು" - (ಭಾರತದ ನೀತಿ ಮಾತುಗಳು).

 "ಶ್ರಮಕ್ಕೆ ತಕ್ಕಂತೆ ಪ್ರತಿಫಲ "


                            ಸುಮಾರು ಮೂರು ಸಾವಿರ ವರ್ಷಗಳ ಹಿಂದೆ, ಕನ್ಫ್ಯೂಶಿಯಸ್ ಬದುಕಿದ್ದಾಗ, ಒಂದು ಸಲ ಅವರು, ಒಂದು ಹಳ್ಳಿಗೆ ಹೋಗಿದ್ದರು.  ಆಗ ಅಲ್ಲಿ ,ತೋಟದಲ್ಲಿ   ಸ್ವಲ್ಪ ವಯಸ್ಸಾದ ವೃದ್ಧರೊಬ್ಬರು ತನ್ನ ಮಗನೊಂದಿಗೆ ಬಾವಿಯಿಂದ ನೀರನ್ನು ಸೇದುತ್ತಿದ್ದರು .ಅವರಿಗೆ ವಯಸ್ಸಾದುದರಿಂದ. ಅದು  ಅವರಿಗೆ ಸ್ವಲ್ಪ  ಕಷ್ಟವೆನಿಸುತ್ತಿತ್ತು .

                            ಆ ಕಾಲದಲ್ಲಿ ನೀರು ಸೇದಲಿಕ್ಕಾಗಿ, ಕುದುರೆ, ಮತ್ತು ಎತ್ತುಗಳನ್ನು ಉಪಯೋಗಿಸುತ್ತಿರುವುದು ಈ ವೃದ್ಧರಿಗೆ  ಗೊತ್ತಿಲ್ಲವೆಂದುಕೊಂಡು , ಕನ್ಫ್ಯೂಶಿಯಸ್, ಅವರನ್ನು ಏತಕ್ಕಾಗಿ ಇಷ್ಟೊಂದು ಕಷ್ಟಪಡುತ್ತಿರುವಿರಿ?  ಜನ ಕುದುರೆ, ಮತ್ತು ಎತ್ತುಗಳಿಂದ, ನೀರನ್ನು ಎತ್ತುವ ವಿಷಯ ನಿಮಗೆ ತಿಳಿಯದೇ? ನೀವೇಕೆ ಇಷ್ಟು ಇಳಿವಯಸ್ಸಿನಲ್ಲಿ ಕಷ್ಟ ಪಡುತ್ತಿರುವಿರಿ?  ಎಂದು ಕೇಳಿದರು.

                         ಆಗ ವೃದ್ದರು, ಹುಷ್, ಮೆಲ್ಲಗೆ ಮಾತಾಡಿ, ನೀವು ನನಗೆ  ಮಾತ್ರ ಕೇಳುವಂತೆ ಹೇಳಿದರೆ ಪರವಾಗಿಲ್ಲ, ಆದರೆ ನನ್ನ ಮಗ ಇನ್ನೂ  ಚಿಕ್ಕವನು, ಅವನೇನಾದರೂ   ನೀವು ಹೇಳಿದ್ದನ್ನು ಕೇಳಿಸಿಕೊಂಡರೆ ಅಷ್ಟೇ, ಎಂದರು.
  ನೀವು ಏನು ಹೇಳುತ್ತಿರುವಿರಿ, ನನಗೆ ಅರ್ಥವಾಗುತ್ತಿಲ್ಲ ಎಂದರು ಕನ್ಫ್ಯೂಶಿಯಸ್ .

                       ಆಗ ವೃದ್ಧರು, ಹೊಸ ಪದ್ದತಿಯು ಬಳಕೆಗೆ ಬಂದಿರುವುದು ನನಗೂ ಗೊತ್ತಿದೆ, ಆದರೆ ಹೊಸ ಮಾದರಿಗಳೆಲ್ಲವೂ ಮನುಷ್ಯನನ್ನು ದೈಹಿಕ ಶ್ರಮದಿಂದ ಬೇರ್ಪಡಿಸುತ್ತವೆ, ನನ್ನ ಮಗ ದೈಹಿಕ ಶ್ರಮದಿಂದ ಹೊರತಾಗುವುದು ನನಗೆ ಇಷ್ಟವಿಲ್ಲ, ಏಕೆಂದರೆ, ಯಾವಾಗ   ಆತ ದೈಹಿಕ ಶ್ರಮದಿಂದ ದೂರವಾಗುವನೋ, ಅಂದು ಆತ ಜೀವನದಿಂದಲೂ ಬೇರ್ಪಡುವನು, ಎಂದು ಹೇಳಿದರು. ಕನ್ಫ್ಯೂಶಿಯಸ್ ರಿಗೂ ,ಆ ವೃದ್ಧರ ಮಾತು ಸರಿಯೆನಿಸಿತು.

                      ಆದರೆ ಇತ್ತೀಚಿಗೆ, ನಮ್ಮಲ್ಲಿ ದೈಹಿಕ ಕೆಲಸ ಮಾಡುವವರೇ ಬಹಳ ಅಪರೂಪವಾಗಿದ್ದಾರೆ, ಹಾಗೆ ಕೆಲಸ ಮಾಡುವವರು,ಹಣ ಕೊಟ್ಟು ‌ಕೆಲಸ ಮಾಡಿಸಿಕೊಳ್ಳಲಾಗದ ನತದೃಷ್ಟರು ಎಂಬ ಮನೋಭಾವನೆ ಎಲ್ಲರಲ್ಲೂ  ಬೇರೂರಿ ಬಿಟ್ಟಿದೆ. ದೈಹಿಕ ಶ್ರಮ ಪಡದೆ ಹಣ ಕೊಟ್ಟು, ಮಿಶನ್ನುಗಳ ಸಹಾಯದಿಂದ,ಕೆಲಸ ಮಾಡಿಸಿ ಕೊಳ್ಳುವವರು,ಅದೃಷ್ಟಶಾಲಿಗಳು ಎಂಬ ಅನಿಸಿಕೆ ಬಲವಾಗುತ್ತಾ ಹೋಗುತ್ತಿದೆ, ಈಗ  ಆಗಿರುವುದು ಹೀಗೆಯೇ, ಏಕೆಂದರೆ ಅನೇಕರು ದೈಹಿಕ ಶ್ರಮಪಡುವುದನ್ನೆ ಬಿಟ್ಟುಬಿಟ್ಟಿದ್ದಾರೆ. ಕೆಲವರು ಮಾತ್ರ ಅತಿಯಾದ ದೈಹಿಕ ಶ್ರಮ ಹಾಕುತ್ತಿರುವರು, ಅತಿಯಾದ ದೈಹಿಕ ಶ್ರಮವೂ ಒಳ್ಳೆಯದೇನಲ್ಲಾ ,ಕೆಲವು ಸಲ ಅದು ಕೂಡಾ ಹಾನಿಕಾರಕವೇ,  ಅತಿ ಕಡಿಮೆ ದೈಹಿಕ ಶ್ರಮವೂ ಹಾನಿಕಾರವೇ. ಆದರೆ ಸಂಯಕ್ ಶ್ರಮ , ಕ್ರಮವಾದ ಕೆಲಸ.

                     ಪ್ರತಿಯೊಬ್ಬರೂ ದೈಹಿಕ ಕೆಲಸ ಮಾಡಲೇಬೇಕು, ಅತ್ಯಂತ ತೀಕ್ಷ್ಣವಾಗಿ ಶ್ರದ್ದೆಯಿಂದ ಸಂತೋಷದಿಂದ ಧನ್ಯತೆಯಿಂದ ಯಾರು ತಮ್ಮ ಜೀವನದ ಅಂಗವಾದ ದೈಹಿಕ ಕೆಲಸದಲ್ಲಿ ಭಾಗವಹಿಸುವರೊ, ಅವರ ಜೈವಿಕ ಶಕ್ತಿ ಮೆದುಳಿನಿಂದ ನಾಭಿಯವರೆಗೆ ಹರಿಯುತ್ತಿರುವುದರ ಅನುಭವ ಅವರಿಗೇ ತಿಳಿಯುತ್ತದೆ. ಕೆಲಸಕ್ಕೆ ಹೃದಯದ ಅಗತ್ಯವಾಗಲಿ ಮೆದುಳಿನ ಅಗತ್ಯವಾಗಲಿ ಇಲ್ಲ, ಕೆಲಸಕ್ಕೆ ಬೇಕಾಗಿರುವ ಶಕ್ತಿ ನೇರವಾಗಿ ಬರುವುದು ನಾಭಿಯಿಂದಲೇ, ಇದೇ ಅದರ ಮೂಲ.

                       ಸಂಯಕ್ ದೈಹಿಕ ಕೆಲಸವೆಂದರೆ, ಅದನ್ನು ನಾವು ಬೇರೆಯವರಿಗಾಗಿ ಮಾಡುವುದಲ್ಲ, ಅದನ್ನು ನಮಗಾಗಿ, ನಮ್ಮ  ಖುಷಿಗಾಗಿ  ಮಾಡುವುದು.ಇದರಿಂದ ಬೇರೆಯವರಿಗೂ ಉಪಯೋಗವೇನೊ  ಆಗಬಹುದು.ಆದರೆ,ಮುಖ್ಯವಾಗಿ  ನಾವು ಮಾಡುವ ದೈಹಿಕ ಶ್ರಮ,ನಮಗಾಗಿಯೇ, ನಮ್ಮ ಒಳಿತಿಗಾಗಿಯೇ.ನಾವು ಯಾವುದಾದರೂ ದೈಹಿಕ ಕೆಲಸದಲ್ಲಿ ತೊಡಗಿದಾಗ, ನಮ್ಮ ಚೈತನ್ಯದ‌‌ಹರಿವು  ಕೇಂದ್ರೀಕೃತವಾಗುತ್ತಾ ಬರುವುದು. ಅದು ತಲೆಯಿಂದ ಕೆಳಗೆ ನಾಭಿಯ ತನಕ ಬರಲಾರಂಭಿಸುವುದು.  ಶಾರೀರಿಕ ಸರಳತೆಗೆ,ಎಚ್ಚರದ ಮನೋಸ್ಥಿತಿಗೆ , ಮತ್ತು, ಸಂಪೂರ್ಣ ಜಾಗೃತಿಯ ಇರುವಿಕೆಗೆ ಏನಾದರೂ ದೈಹಿಕ ಶ್ರಮ ಅತ್ಯಗತ್ಯ.

   ‌                 ಪ್ರತಿ ವ್ಯಕ್ತಿಯೂ  ಲವಲವಿಕೆಯಿಂದ, ಪ್ರಫುಲ್ಲತೆಯಿಂದ, ಸ್ವಾಸ್ಥ್ಯದಿಂದ ಇರಲು ತನ್ನ ದೇಹಕ್ಕೆ ಎಷ್ಟು ಶ್ರಮದ ಅಗತ್ಯವಿದೆ ಎಂಬುದನ್ನು ಅವರವರ  ದೇಹಕ್ಕೆ ಅನುಕೂಲವಾಗಿ ಕಂಡುಕೊಳ್ಳಬೇಕು. ನಮ್ಮೊಳಗೆ ಎಷ್ಟು ಶುಭ್ರ ಗಾಳಿ ಇರುವುದೊ ಅಷ್ಟು ನಮ್ಮ ಉಸಿರು ಕೂಡಾ ಸುಖದಾಯಕವಾಗಿರುವುದು. ಯಾರ ಜೀವನದಲ್ಲೇ ಆಗಲಿ, ಸಮ್ಯಕ್ ಕೆಲಸ ಇಲ್ಲದಿದ್ದಲ್ಲಿ, ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಎಂದಿಗೂ ಸಹ ಸಾಧ್ಯವಿಲ್ಲ. ಧಾರ್ಮಿಕ ಸ್ಥಿತಿಗೆ ಅತ್ಯಂತ ಮುಖ್ಯವಾದ ಒಂದು ಮೆಟ್ಟಿಲು ಸಂಯಕ್ ದೈಹಿಕ ಶ್ರಮವಾಗಿದೆ. 

"ಕಾಯಕವೇ ಕೈಲಾಸ"

FlipKart ಕಂಪನಿ- ಭಾರತೀಯ ಇ-ಕಾಮರ್ಸ್ ಉದ್ಯಮದಲ್ಲಿ 48% ಮಾರುಕಟ್ಟೆಯೇ ಪಾಲುದಾರ- "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್"

           "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್   ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್ * ಸ್ಥಾಪಕರು : ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್  (...