"ಸಮಸ್ಸೆಯೇ ಅಂತ್ಯ ಮಾಡಿ, ಹೊಸ ಜೀವನ ಆರಂಭ ಮಾಡುವುದು ಹೇಗೆ "???


"ಸಮಸ್ಸೆಯು ಜೀವನಕ್ಕೆ ಮುಳ್ಳಾದಗ ಅದಕ್ಕೆ ಪರಿಹಾರವು ಕೊಡ ದೊಡ್ಡದಾಗಿರುತ್ತದೆ ಆಗ ಯಶಸ್ಸು,ಕೀರ್ತಿ, ಸಂಪಾದನೆ ಎಲ್ಲಾವು ದೊರೆಯುತ್ತದೆ" 

                      


                     "ಶ್ರಮ ಪಟ್ಟು ಕೆಲಸ ಮಾಡು, ಬುದ್ದಿವಂತಿಕೆಯಿಂದ ಹೆಜ್ಜೆ ಹಾಕು, ಹಂತ ಹಂತವಾಗಿ ಇರುವು ಎಲ್ಲಾ ಸಮಸ್ಸೆಗಳಿಗೆ ಪರಿಹಾರ ಸಿಕ್ಕೆ ಸಿಗುತ್ತದೆ ಆ ಸಮಯ ಸಲುವಾಗಿ ಕಾಯಬೇಕು, ಕಾಯದಾಗಲೇ ನಮಗೆ ಯಶಸ್ಸು ದೊರೆಯುತ್ತದೆ". ಯಾವುದೇ ಶ್ರಮಕ್ಕೆ ಬೆಲೆ ಬರಬೇಕಾದರೆ ಅದರಿಂದ ಪಟ್ಟಿರುವು ಕಷ್ಟಕ್ಕೆ ವಿನಃ , ಸುಖವಾಗಿ ಇದ್ದಾಗ ಅದರ ಬೆಲೆ ನಮಗೆ ಗೊತ್ತಾಗವುದಿಲ್ಲ ಹೀಗಾಗಿ ಯಾವುದೇ ಆಗಲಿ ನಾವು ಸಂತೋಷದಿಂದ ಸ್ವೀಕರಿಸಬೇಕು, ಅದನ್ನು ಬಿಟ್ಟು ಯಾವುದೇ ತಪ್ಪು ನಿರ್ಧಾರಗಳು ತೆಗೆದುಕೊಳ್ಳಬಾರದು...

                        ನ್ಯಾಯುತವಾಗಿ ಸಂಪಾದನೆ ಮಾಡಿ ನಮಗೆ ಆಗಿರುವ ಸಮಸ್ಸೆಗಳನ್ನು ಪರಿಹಾರ ಮಾಡಿಕೊಳ್ಳಬೇಕು, ಜೀವನದಲ್ಲಿ ಯಶಸ್ಸು ಹಾಗೆ ಬರುವುದಿಲ್ಲ ಅದರ ಸಲುವಾಗಿ ಹಗಲು-ಇರುಳು ಶ್ರಮ ಪಡಬೇಕಾಗುತ್ತದೆ, ಪ್ರತಿ ನಿತ್ಯ ಯೋಚನೆ ಮಾಡಿ ಕಾರ್ಯನಿರ್ವಹಿಸಬೇಕು. ಪ್ರತಿಯೊಂದ ಕೆಲಸಕ್ಕೆ ಯೋಜನೆ ಹಾಕಿಕೊಂಡು ಕೆಲಸ ಮಾಡಿದಾಗ ಮಾತ್ರ ನಮಗೆ ಅದರಲ್ಲಿ ಯಶಸ್ಸು ಸಿಗುತ್ತದೆ. ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಪ್ರತಿನಿತ್ಯ ಅದರ ಬಗ್ಗೆ ಮೌಲ್ಯಮಾಪನ ಮಾಡಬೇಕು ಹಾಗೆ ಒಳ್ಳೆಯ ಸಂಬಂಧಗಳು ಕೊಡ ಉಳಿಸಿಕೋಳ್ಳಬೇಕು ಯಾವುದೇ ಸಮಯದಲ್ಲಿ ಅದು ಉಪಯೋಗಕ್ಕೆ ಬರುತ್ತದೆ.‌

                     ಯಾವುದೇ ಸಮಸ್ಯೆಗೆ  ಅಷ್ಟು ಬೇಗ ಪರಿಹಾರ ಸಿಗುವುದಿಲ್ಲ , ಅದನ್ನು ಸರಿಪಡಿಸಿಕೊಳ್ಳಲು ಕಾಲ ಅವಕಾಶ ಬೇಕಾಗುತ್ತದೆ, ಅದಕ್ಕೆ ಸರಿಯಾದ ಪರಿಹಾರ ಹುಡುಕಿ  ಆದಷ್ಟು ಬೇಗ ಸರಿ ಮಾಡಿಕೊಳ್ಳಬೇಕು. "ಪ್ರಯತ್ನಕ್ಕೆ ಫಲ ನೀಡದೆ ಇದ್ದಾಗಲೂ ಕೊಡ ಸೋಲನ್ನು ಒಪ್ಪಿಕೊಳ್ಳಬಾರದು, ಯಾಕೆಂದರೆ  ನಮ್ಮ ಆತ್ಮ ವಿಶ್ವಾಸ  ಎಲ್ಲಾ ಕಳೆದು ಕೊಂಡಂತೆ ಲೆಕ್ಕ, ಹೀಗಾಗಿ ಎಂದು ಆ ವಿಶ್ವಾಸ ಕಳೆದುಕೊಳ್ಳಬಾರದು".

                      ನಿಮ್ಮ ಪ್ರಾಮಾಣಿಕ ಪ್ರಯತ್ನ ಮಾಡುವುದರ ಮೂಲಕ ಇತಿಹಾಸ ನಿರ್ಮಿಸಬೇಕು, ನೀವು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದರು ಅದಕ್ಕೆ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಬೇಕು ಇದರಿಂದ "ಯಶಸ್ಸು ಗ್ಯಾರಂಟಿ ".

////////////////********************+++++++****++++++***********///////////////////.....------.....------!!

"ಮಾನಸಿಕ ಕಾಯಿಲೆಯನ್ನು ಹೋಗಲಾಡಿಸಿ, ನೆಮ್ಮದ್ದಿಯನ್ನು ಬಯಸುವುದು ಹೇಗೆ" ???

 "ಪ್ರಪಂಪಚದ ಸಂಪತ್ತು ಒಂದು ಕಡೆ ಆದರೆ ನಮ್ಮ ಮಾನಸಿಕ ನೆಮ್ಮದ್ದಿಯ ಸಂಪತ್ತು ಒಂದು ಕಡೆ ."


                            ಯಾವುದೇ ಒಂದು ಸಮಸ್ಸೆ ಇದೆ ಎಂದರೆ ಅದಕ್ಕೆ ಒಂದು ಪರಿಹಾರ ಇದ್ದೆ ಇರುತ್ತದೆ ಹೀಗಾಗಿ ನಾವು ಅದನ್ನು ಸರಿಯಾಗಿ ಗುರುತಿಸಿ ಪರಿಹಾರ ಮಾಡಿಕೊಳ್ಳಬೇಕು, ನಾನು ಬರೆಯುತ್ತೀರುವು ಉದ್ದೇಶ ಇಷ್ಟೆ ಎಲ್ಲಾರಿಗೂ ಇದರ ಪ್ರಯೋಜನ ಸಿಗಬೇಕು ಎಂಬುದಾಗಿದೆ,  ದೇಹಕ್ಕೆ ಕಾಯಿಲೆ ಬಂದರೆ ಔಷದ ಹಚ್ಚಕೊಳ್ಳಬಹುದು ಆದರೆ ಮಾನಸಿಕವಾಗಿ ನೆಮ್ಮದ್ದಿಯನ್ನು ಕಳಕೊಂಡರೆ ಅದಕ್ಕೆ ಯಾವು ರೀತಿ ಔಷದವನ್ನು ಉಪಯೋಗಿಸಿ ಆ ಕಾಯಿಲೆಯನ್ನು ನಿವಾರಿಸಿಕೋಳ್ಳಬೇಕು ಎಂದು ಇಲ್ಲಿ ಹಂಚಿಕೊಳ್ಳಲಾಗಿದೆ...

                           ಮಾನಸಿಕವಾಗಿ ನಾವು ತುಂಬಾ ತೊಂದರೆಗೆ ಒಳಪಟ್ಟಿರುತ್ತೆವೆ  ಆ ಸಮಯದಲ್ಲಿ ನಾವು ಏನು ತಪ್ಪು ಮಾಡಿದ್ದರು ಅದು ನಮಗೆ ಸರಿಯಾಗಿಯೇ ಕಾಣಿಸುತ್ತದೆ ಅದನ್ನು ನಾವು ಯಾವು ರೀತಿ ಗುರುತಿಸಬೇಕು ಎಂಬುದು ನಮಗೆ ಅರಿವಿರುವುದಿಲ್ಲ, ಆಗ ನಾವು ಹಲವಾರು ತಪ್ಪು ನಿರ್ಧಾರಗಳು ತೆಗೆದುಕೊಳ್ಳುತ್ತೇವೆ.  ನಮಗೆ ಸಮಯ ಇರುವುದಿಲ್ಲ ಆ ಸಮಯದಲ್ಲಿ ತುರ್ತಾಗಿ ಯಾವುದೇ ಒಂದು ನಿರ್ಧಾಗಳು ಮಾಡುವುದು. ಯಾವುದೇ ವ್ಯಕ್ತಿಗಳೊಂದಿಗೆ ವ್ಯವಹಾರಿಸಬೇಕಾದರೆ ಅವನ ಜೊತೆ  ಮಾನಸಿಕವಾಗಿ ನೀವು ತಯಾರಿ ಇರುವುದಿಲ್ಲ  ಅತಂಹ ಸಮಯದಲ್ಲಿ ನೀವು ವ್ಯವಹರಿಸಲು ಹೋಗಿ ಸರಿಯಾದ ನಿರ್ಧಾರಗಳು ತೆಗೆದುಕೊಳ್ಳಲು ಆಗುವುದಿಲ್ಲ.

                            ನಮ್ಮನ್ನು ನಾವು ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕು ಆವಾಗಲೇ ನಮಗೆ ಪರಿಹಾರ ಸಿಗುವುದು, ಅದಕ್ಕೆ ಮೊದಲು ನಾವು ಪ್ರತಿ ದಿನ ನಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅದು ಯಾವು ರೀತಿ ಎಂದರೆ, ಪ್ರತಿನಿತ್ಯ ಬೆಳಗ್ಗೆ ೩ ರಿಂದ ೫ ಗಂಟೆ ಸಮಯದಲ್ಲಿ ದಿನಾಲೂ ಯೋಗಸಾನ ಹಾಗೂ ಧ್ಯಾನ ೩೦ ನಿಮಿಷ ಮಾಡಬೇಕು ಅದರಿಂದ ಬಹಳ ಮಾನಸಿಕವಾಗಿ ಬದಲಾವಣೆಗಳು ನಿಮ್ಮಲ್ಲಿ ಕಂಡುಬರುತ್ತವೆ, ಪ್ರತಿನಿತ್ಯ  ಊಟದಲ್ಲಿಯು ನೀವು ಒಳ್ಳೆಯ ಆಹಾರ ಬಳಸುವುದರಿಂದ ನಿಮ್ಮಲ್ಲಿ ಉತ್ತೇಜನೆ ಹೆಚ್ಚಾಗಿ ನೀವು ತುಂಬಾ ಆಕರ್ಷಿತ್ತರಾಗಿ ವ್ಯವಹಾರದಲ್ಲಿಯು ಸರಿಯಾದ ನಿರ್ಧಾರಗಳು ತೆಗೆದುಕೊಳ್ಳಬಹದು.

                             ಕೆಲವೊಂದು ಅಭ್ಯಾಸಗಳು ನಾವು ರೊಡಿಸಿಕೊಳ್ಳಬೇಕು ಯಾವುದೇ ಒಂದು ವಿಷಯದ ಬಗ್ಗೆ  ವೇಗವಾಗಿ ನಿರ್ಧಾರ ತೆಗೆದುಕೊಳ್ಳಬೇಕು  ಯಾಕೆ ಅಂತ ಕೇಳಬಹುದು, ಅದರಿಂದ ನಮಗೆ ಏನು ಪ್ರಯೋಜನೆ ಅಂತಲೂ ಕೇಳಬಹುದು , ಅದಕ್ಕೆ ಒಂದು ವಿಷಯ ಹೇಳಲು ಬಯಸುತ್ತೇನೆ ತುಂಬಾ ಸಮಯ ತೆಗೆದುಕೊಂಡರೆ ಅಲ್ಲಿ ನಮಗೆ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಸರಿಯಾದ ನಿರ್ಧಾರಗಳು ತೆಗೆದುಕೊಳ್ಳಲು  ಆಗದೆ ಹಾಗೂ ಬಹಳ "ಓವರ್‌ ಥೀಕಿಂ"ಗೆ ಒಳಗಾಗಿ ಮಾನಸಿಕ ಒತ್ತಡಕ್ಕೆ ಮಣಿದು ಅದಕ್ಕೆ ಮತ್ತೆ ಶರಣಾಗಬೇಕಾಗುತ್ತದೆ.

                            ಅದರಿಂದ ನಾವು ಹೋರಬರಬೇಕಾದರೆ ನಮ್ಮ ಮನಸ್ಸಿನ ಮೇಲೆ ಯಾವುದೇ  ರೀತಿಯ ಒತ್ತಡ ಹೇರಬಾರದು, ಅದರಿಂದ ಹಲವಾರು ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ, ಹೀಗಾಗಿ ಅದರಿಂದ ನಮ್ಮ ಮನಸ್ಸು ಪ್ರಶಾಂತವಾಗಿ ಇಡಬೇಕು ಆಗ ನಮಗೆ ನಮ್ಮ ಜೀವನದಲ್ಲಿ ಹಲವಾರು ಅದ್ಬುತ ಬದಲಾವಣೆಗಳು ನಡೆಯುತ್ತವೆ. ತುಂಬಾ ಚಟುವಟಿಕೆಯಿಂದ ಇದ್ದಾಗ ಮಾತ್ರ ನಾವು ಮಾನಸಿಕ ಕಾಯಿಲೆಗೆ ಒಳಗ ಆಗುವುದಿಲ್ಲ  ಅದರಿಂದ ನಮಗೆ ಎಲ್ಲಾ ಹಂತದಲ್ಲಿಯು ಯಶಸ್ಸು ದೊರೆಯುವುದು.

------------------------@@@@@@@@@@@@@@@------------------------

  "ದೇಹದ ಮೇಲೆ ನಾವು ಸಲಿಸಾಗಿ ಹಿಡಿತ ಸಾಧಿಸಬಹುದು ಆದರೆ ನಮ್ಮ ಮನಸ್ಸು ಗೆಲ್ಲುದು ಅಷ್ಟು ಸುಲಭವಲ್ಲ, ಹೀಗಾಗಿ ನಮ್ಮ ಪ್ರತಿನಿತ್ಯ ದಿನಚರಿಯಿಂದ ನಾವು ಈ ಮನಸ್ಸನ್ನು ಗೆಲ್ಲಬಹುದು"

"ನುಡಿಮುತ್ತುಗಳು"

"ನುಡಿದಂತೆ ನಡೆ , ನಡೆದಂತೆ ಬದುಕು, ಬದುಕಿದಂತೆ ಜೀವನ ಮಾಡು"

 




🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈🎈

"ಸಾಲದಿಂದ ಸಂಬಂಧಗಳು ಉಳಿಸಿಕೊಳ್ಳುವುದು ಸಾಧ್ಯಾನಾ" ?

                                 

"ಯಾವುದೇ ಸಂಬಂಧಗಳು ಶಾಶ್ವತವಾಗಿ ಉಳಿಯಬೇಕಾದರೆ ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಬೇಕು. "


                             ಪ್ರತಿದಿನ ಬೆಳಿಗ್ಗೆ ಎದ್ದು  ಕೊಡಲೇ  ಎಲ್ಲರ ಮನೆಯಲ್ಲಿ ಕಾಣುವುದು, ಅದೇ ಹಣಕಾಸಿನ ಸಮಸ್ಯೆ ಅದನ್ನು ಸರಿಪಡಿಸಲು ಹೋಗಿ ಹಲವಾರು ಸಂಬಂಧಗಳನ್ನು ದೂರ ಮಾಡಿಕೊಳ್ಳುತ್ತಾರೆ. ಯಾವುದೇ ಒಂದು ಸಂಬಂಧ ಶಾಶ್ವತವಾಗಿ ಉಳಿಯಬೇಕಾದರೆ, ಹಣಕಾಸಿಗೆ ಒಂದೇ ಮಾನ್ಯತೆ ಕೊಡಬಾರದು ಎಲ್ಲವೂ ಹಣದಿಂದಲೇ ಆರಂಭ, ಮುಕ್ತಾಯ ಆಗುವುದಿಲ್ಲ ಯಾವುದೇ ಸಂಬಂಧ ಇರಲಿ, ಸಂಬಂಧಕ್ಕೆ ಇರುವು ಬೆಲೆ ಅರ್ಥ ಮಾಡಿಕೊಳ್ಳಬೇಕು.

                    ಯಾವುದೇ ಸಂಬಂಧಗಳ ಮಧ್ಯೆ ಹಣಕಾಸಿನ  ವ್ಯವಹಾರ ನಡೆದು ಹೋಯಿತು ಎಂದು ಅಂದುಕೊಳ್ಳಿ, ಆ ವ್ಯವಹಾರದಲ್ಲಿ ಸಂಬಂಧಗಳು ಉತ್ತಮ ಗುಣಮಟ್ಟದಾಗಿರಬೇಕು ಅಂದರೆ ಸರಿಯಾದ ಸಮಯಕ್ಕೆ ಎಲ್ಲವು ಸರಿಯಾಗಿ ಮುಗಿಸಬೇಕು,  ವ್ಯವಹಾರದ ಅವಶ್ಯಕತೆ ಬಿದ್ದಾಗ ಮತ್ತೆ ಬಾವಿ ತೊಡಲು ಹೋಗಿ ಆ ಬಾವಿ ಒಳಗಡೆ ಮುಳಗಬಾರದು ಸಂಬಂಧಗಳು ಹಾಗೆ ಇರುವುದು ಅದನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.
              
               ನಿಮ್ಮ ಸಲಹೆಗಳು ಕೋಡಿ ಅದರ ಆಧಾರದ ಮೇಲೆ ಹಲವಾರು ಅಭಿಪ್ರಾಯ ಪ್ರಸ್ತುತ ಪಡಿಸಲಾಗುವುದು. ಸಾಲ ಮಾಡಿ ಸಂಸಾರ ಮಾಡುತ್ತಾರೆ, ಅಂಥವರನ್ನು ನೋಡಿ ನಿಮ್ಮ ಸಂಸಾರ ಹಾಳು ಮಾಡಿಕೊಳ್ಳಬೇಡಿ, ಸಾಲ ಎಂಬುದೇ ತುಂಬಾ ಅಪಾಯ ಅದರಿಂದ ಆದಷ್ಟು ದೂರ ಇರುವುದು ಒಳ್ಳೆಯದು ಹೀಗಾಗಿ ಮೊದಲೇ ಮುಂಜಾಗ್ರತೆಯಾಗಿ ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಲು ಆರಂಭಿಸಿ.

                ಯಾವುದೇ ಸಂಬಂಧಗಳು ಉತ್ತಮವಾಗಿ ನಿಮ್ಮ ಜೀವನದಲ್ಲಿ ಎಲ್ಲವೂ ಸಿಗಬೇಕಾದರೆ ಮೊದಲು ನೀವು ಮನಿ ಮ್ಯಾನ್ಜ್ ಮೆಂಟ್ ತಿಳಿದುಕೊಂಡು ಅವುಗಳನ್ನು ಅಳವಡಿಸಿಕೋಳ್ಳಬೇಕು. ಅದು ಆದ್ಮೇಲೆ ನಿಮ್ಮ ಯಾವುದೇ ಸಂಬಂಧಗಳು ನೀವು ದೂರ ಮಾಡಿಕೋಳ್ಳಬೇಡಿ ಅದರ ಜೊತೆಗೆ ಜೀವನ ಮುಕ್ತಾಯ ಮಾಡಿ ಇದರಿಂದ ಒಂದು ವಿಷಯ ಅರ್ಥ ಮಾಡಿಕೊಳ್ಳಿ , ಒಂದು ಕೆಲಸ ಕ್ಕೆ ಬಾರದ ಒಂದು ವಸ್ತು ಒಂದು ಇಲ್ಲ ಒಂದು ಸಮಯಕ್ಕೆ ಉಪಯೋಗಕ್ಕೆ ಬರುತ್ತದೆ ಅಂಥದರಲ್ಲಿ ಒಬ್ಬ ವ್ಯಕ್ತಿ ಕೆಲಸಕ್ಕೆ ಬರಲ್ಲಾವಾ.....
                        
"ಕೊನೆಗೂ ಒಂದು ಸಂಬಂಧ ಬೇಕೆ ಬೇಕೆಂದು ಎಲ್ಲಾರಿಗೂ ಹೇಳಬಯಸುತ್ತೇನೆ "...... 

🖤🤎🖤🤎🖤🤎🖤🤎🖤🤎🖤🤎🤎🖤🤎🖤🤎🖤🤎🤎🖤🤎🖤🤎🤎🖤🤎🖤🤎🤎🖤🖤🤎



"ಅಲೆಕ್ಸಾಂಡರ್ ಮಹಾಶಯನ ಇತಿಹಾಸದ ಒಂದು ಸತ್ಯ ಘಟನೆ ತುಂಬಾ ಕುತೂಹಲಕಾರಿ ವಿಷಯ"


.                     
India a great culture in Spirituality

          "ಇಡೀ ಪ್ರಪಂಚವನ್ನೇ ಗೆಲ್ಲಬೇಕೆಂಬ ಉದ್ದೇಶದಿಂದ, ಅಲೆಕ್ಸಾಂಡರ್" ತನ್ನ ಅಪಾರವಾದ ಸೈನ್ಯದೊಂದಿಗೆ ಹೊರಟ. ಎಷ್ಟೋ ದೇಶಗಳು ಇವನಿಗೆ ಶರಣಾದವು, ಇದರಿಂದ ಬರುಬರುತ್ತಾ  ಇವನಿಗೆ ಅಹಂಕಾರ ಹೆಚ್ಚಾಗುತ್ತಾ ಹೋಯಿತು. 

    ಈ ಬಾರಿ ಭಾರತದ ಮೇಲೆ ದಾಳಿ ಮಾಡಬೇಕೆಂದುಕೊಂಡು ಹೊರಟ. ಹೊರಡುವಾಗ ಒಮ್ಮೆ ತನ್ನ ಗುರು ಅರಿಸ್ಟಾಟಲ್ ನನ್ನು ಭೇಟಿಯಾಗಲು ಬಂದ. ಅರಿಸ್ಟಾಟಲ್ ಮಹಾಜ್ಞಾನಿ, ಅವನಿಗೆ ಭಾರತದ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ಪರಿಚಯವಿತ್ತು. ಅಲೆಕ್ಸಾಂಡರ್ ಗುರುಗಳೇ, ನಾನು ಭಾರತದ ಮೇಲೆ ದಾಳಿ ಮಾಡಲು ಹೋಗುತ್ತಿದ್ದೇನೆ, ಬರುವಾಗ ನಿಮಗೆ ಅಲ್ಲಿಂದ ಏನನ್ನು ತರಲಿ? ಎಂದು ಕೇಳಿದ.

              ಅರಿಸ್ಟಾಟಲ್ ನಗುತ್ತಾ, ಭಾರತವನ್ನು ಗೆಲ್ಲಬೇಕೆಂಬ ಆಸೆ ನಿನಗೇಕೆ? ಆ ದೇಶವನ್ನು ಗೆಲ್ಲುವುದು ಅಷ್ಟು ಸುಲಭವಲ್ಲ, ನೀನು ಕೆಲವು ರಾಜರುಗಳನ್ನು ಗೆಲ್ಲಬಹುದು, ಒಂದಿಷ್ಟು ಸಂಪತ್ತನ್ನೂ ಪಡೆಯಬಹುದು, ಆದರೆ ಅದ್ಯಾವುದೂ ಭಾರತವಲ್ಲ. ಭಾರತದ ನಿಜವಾದ ಶಕ್ತಿ ಇರುವುದು ಆಧ್ಯಾತ್ಮದಲ್ಲಿ, ನಿನಗೆ ಸಾಧ್ಯವಾದರೆ ಭಾರತದಿಂದ ಒಬ್ಬ ಋಷಿಯನ್ನೊ, ಅಥವಾ ಒಬ್ಬ ಸಾಧಕರನ್ನೊ ಕರೆದು ತಾ ,ಅದರಿಂದ ಎಲ್ಲರಿಗೂ ಪ್ರಯೋಜನವಿದೆ ಎಂದು ಹೇಳಿದರು.        

    ಅಲೆಕ್ಸಾಂಡರ್ ಗುರುಗಳಿಗೆ ನಮಸ್ಕರಿಸಿ,ಅಲ್ಲಿಂದ ಹೊರಟು, ತನ್ನ ಯುದ್ಧ ಯಾತ್ರೆಯನ್ನು ಆರಂಭಿಸಿದ. ತನ್ನ ಕಡೆಯವರಿಗೆ, ಗುರುಗಳು  ಹೇಳಿದಂತ ದಾರ್ಶನಿಕರನ್ನು ಹುಡುಕಲು ಹೇಳಿದ. ಒಂದು ದಿನ ಅವನ ಕಡೆಯವರು ಬಂದು, ಊರ ಹೊರಗಿನ ಆಶ್ರಮದಲ್ಲಿ, ನಿಮ್ಮ ಗುರುಗಳು ಹೇಳಿದಂತಾ ವ್ಯಕ್ತಿಯೊಬ್ಬರು ಇರುವುದಾಗಿ ಹೇಳಿದರು. ಆಗ ಅಲೆಕ್ಸಾಂಡರ್," ಆ ವ್ಯಕ್ತಿಗೆ ಏನು ಬೇಕೋ ಅದೆಲ್ಲವನ್ನು ಕೊಟ್ಟುಬಿಡಿ, ನನ್ನ ಅಪ್ಪಣೆಯ ಅವಶ್ಯಕತೆ ಇಲ್ಲ, ಎಷ್ಟೇ ಸಂಪತ್ತು ಖರ್ಚಾದರೂ ಚಿಂತೆ ಇಲ್ಲ"  ಅವರನ್ನು ಇಲ್ಲಿಂದ ನಮ್ಮಲ್ಲಿಗೆ ಕರೆದುಕೊಂಡು ಹೋಗೋಣ,ಎಂದು ಹೇಳಿದ. 

            ಒಂದು ವಾರದ ನಂತರ, ಅಲೆಕ್ಸಾಂಡರ್ ನ ಮಂತ್ರಿ ಬಂದು, ನಾವು ಎಷ್ಟೇ ಪ್ರಯತ್ನಿಸಿದರೂ, ಆ ಸನ್ಯಾಸಿ ನಮ್ಮ ಯಾವ ಮಾತಿಗೂ, ಆಸೆಗೂ , ಒಪ್ಪುತ್ತಿಲ್ಲವೆಂದು, ತಿಳಿಸಿದ .ಅಲೆಕ್ಸಾಂಡರ್ನಿಗೆ ಈಗ ಕೋಪ ಬಂತು, ತನ್ನಂತಹ ಚಕ್ರವರ್ತಿಯ ಮಾತನ್ನು ಮೀರಿದ ಈ ಸನ್ಯಾಸಿಯ ಅಹಂಕಾರ ಎಷ್ಟಿರಬಹುದು? ಎಂದುಕೊಂಡು ತಾನೇ ಅವರಿದ್ದ ಆಶ್ರಮದ ಕಡೆಗೆ ಬಂದ.

            ಒಂದು ಮರದ ಬುಡದಲ್ಲಿ ಆ ಸನ್ಯಾಸಿ, ಧ್ಯಾನಕ್ಕೆ ಕುಳಿತಿದ್ದರು. ಆಗಸ್ಟೇ ಸೂರ್ಯೋದಯವಾಗುತ್ತಿತ್ತು. ಸನ್ಯಾಸಿ ಸೂರ್ಯನಿಗೆ ಮುಖ ಮಾಡಿ ಕುಳಿತಿದ್ದರು. ಅವರ ಮುಖದ ಅಪೂರ್ವವಾದ ಕಾಂತಿ, ತೇಜಸ್ಸು, ಅಲೆಕ್ಸಾಂಡರ್ ನನ್ನು ತಲೆತಗ್ಗಿಸುವಂತೆ ಮಾಡಿತು. ಆತ ನಿಧಾನವಾಗಿ, ಸ್ವಾಮಿ, ಮಹಾತ್ಮರೆ ತಾವು ದಯಮಾಡಿ ನನ್ನೊಡನೆ ನನ್ನ ದೇಶಕ್ಕೆ ಬರಬೇಕು. ತಮ್ಮ ದಿವ್ಯ ಚಿಂತನೆಯ ಬೆಳಕನ್ನು ನಮ್ಮ ಜನರಿಗೂ ನೀಡಬೇಕು, ಎಂದು ದೈನ್ಯದಿಂದ ಕೇಳಿಕೊಂಡ.

          ನಿಮ್ಮ ಆಮಂತ್ರಣಕ್ಕೆ ಧನ್ಯವಾದಗಳು, ಆದರೆ ನಾನು ಈ ಪುಣ್ಯಭೂಮಿಯನ್ನು ಬಿಟ್ಟು ಎಲ್ಲಿಗೂ ಬರಲಾರೆ, ಎಂದರು ಸನ್ಯಾಸಿ. ಅಲೆಕ್ಸಾಂಡರ್ ನಿಗೆ, ಇಲ್ಲಾ,ಎಂಬ ಉತ್ತರವನ್ನು ಕೇಳಿಯೇ ಅಭ್ಯಾಸವಿಲ್ಲ, ತಾನು ತಂದಿದ್ದ ಮುತ್ತು ರತ್ನಗಳ ರಾಶಿಯನ್ನು ಅವರ ಮುಂದೆ ಸುರಿದು, ಸ್ವಾಮಿಗಳೇ, ಇದೆಲ್ಲಾ ನಿಮ್ಮದೇ, ಇಷ್ಟೇ ಅಲ್ಲಾ  ತಾವು ಏನು ಅಪೇಕ್ಷೆ ಪಡುತ್ತಿರೋ ಅದೆಲ್ಲವನ್ನು ನಾನು ನಿಮಗೆ ನೀಡುತ್ತೇನೆ, ಎಂದು ಹೇಳಿದ, ಅಲೆಕ್ಸಾಂಡರ್. 

       ಈಗ ಸನ್ಯಾಸಿಯ ಮುಖದಲ್ಲಿ, ನೆರಿಗೆಗಳು ಮೂಡಿದವು, ಕಣ್ಣು ಕೆಂಪಾದವು,"  ದಯವಿಟ್ಟು ನನ್ನ ಆಶ್ರಮದಲ್ಲಿ ಈ ಕೊಳಕನ್ನು ಹಾಕಿ ಅಪವಿತ್ರ ಮಾಡಬೇಡಾ, ಇದನ್ನೆಲ್ಲಾ ಈ ಕ್ಷಣದಲ್ಲೇ ತೆಗೆದುಕೊಂಡು ಇಲ್ಲಿಂದ ಹೊರಡು" ಎಂದು ಗದರಿದರು ಸನ್ಯಾಸಿಗಳು. ಈಗ ಚಕ್ರವರ್ತಿಗೂ ಕೋಪ ಉಕ್ಕಿ ಬಂದಿತು, ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂಬ ಎಚ್ಚರ ನಿಮಗಿದೆಯೇ? ನಾನು ,ಸಾಮ್ರಾಟ್ ಅಲೆಕ್ಸಾಂಡರ್ ಚಕ್ರವರ್ತಿ, ನಿಮ್ಮ ಈ ಉದ್ಧಟತನದ ಮಾತಿಗೆ ಏನು ಶಿಕ್ಷೆಕೊಡಬಹುದೆಂಬ  ಕಲ್ಪನೆ ಕೂಡಾ ನಿಮಗಿದೆಯೇ? ಎಂದು ಕೋಪದಿಂದ ಹೇಳಿದ. 

        ಆಗ ಸನ್ಯಾಸಿ, ಅಯ್ಯೋ ಮಗೂ, ನನ್ನನ್ಯಾಕೆ ಹೆದರಿಸಲು ನೋಡುತ್ತೀಯಾ? ನೀನು, ಹೆಚ್ಚೆಂದರೆ, ಏನು ತಾನೆ ಮಾಡಬಹುದು? ಈ ದೇಹವನ್ನು  ನಾಶ ಮಾಡಬಹುದು! ಅದು ಬಂದಿರುವುದೇ ನಾಶವಾಗಲು, ಆದರೆ ಒಳಗಿನ ಆತ್ಮವನ್ನು ನಿನ್ನಿಂದ ಮುಟ್ಟಲೂ ಸಾಧ್ಯವಿಲ್ಲ, ನಿನ್ನ ಕೆಲಸ  ನೋಡಿಕೊಂಡು, ಮೊದಲು ಇಲ್ಲಿಂದ ಹೊರಡು, ಆಶ್ರಮದ ಶಾಂತಿಗೆ ಭಂಗ ತರ ಬೇಡ, ಎಂದರು .ಅಲೆಕ್ಸಾಂಡರ್ ಸಪ್ಪಗಾದ, ಹಾಗೂ ಅವನಿಗೆ ಅರ್ಥವಾಯಿತು", ತಾನು ಐಹಿಕ ಭೋಗದ ವಸ್ತುಗಳನ್ನು ಗೆಲ್ಲಬಹುದು, ಆದರೆ ಆಧ್ಯಾತ್ಮಿಕ ಸತ್ಯವನ್ನು ಅರಿಯುವುದು ಸಾಧ್ಯವಿಲ್ಲವೆಂದು."

         ಆತ ಬಹಳ ನಮ್ರತೆಯಿಂದ, ಗುರುಗಳೇ ನನ್ನೊಂದಿಗೆ ಬರುವುದು ಬೇಡ, ನನ್ನಿಂದ ಯಾವುದಾದರೂ ಸೇವೆಗೆ ಅವಕಾಶವಿದೆಯೇ? ಎಂದು ಕೇಳಿದ,ಸನ್ಯಾಸಿಗಳು ನಕ್ಕು, ನನಗೆ ಯಾವ ಸೇವೆಯೂ ಬೇಕಿಲ್ಲ, ನೀನು ಏನಾದರೂ ಸೇವೆ ಮಾಡುವುದೇ ಆದರೆ, ದಯವಿಟ್ಟು ನನ್ನ ಎದುರಿನಿಂದ ಪಕ್ಕಕ್ಕೆ ಸರಿದು ಬಿಡು, ನೀನು ನನ್ನ ಮೇಲೆ ಬೀಳುತ್ತಿರುವ ಸೂರ್ಯನ ಕಿರಣಗಳಿಗೆ ಅಡ್ಡಲಾಗಿ ನಿಂತಿರುವೆ" ಎಂದರು

     ಅಲೆಕ್ಸಾಂಡರ್ ಅಲ್ಲಿಂದ ಸರಿದು ಹೋದ.ಇದೇ ನಮ್ಮ ದೇಶದ  ಹಿಂದಿನ, ದಾರ್ಶನಿಕರು, ಕಂಡುಕೊಂಡಿದ್ದ ಸತ್ಯ. ಅವರು ಶಾಶ್ವತವಾದ ಆಧ್ಯಾತ್ಮಿಕ ಸತ್ಯದ ಹುಡುಕಾಟದಲ್ಲಿ , ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಿದ್ದರು. ಅವರು  ದಿನನಿತ್ಯದ, ಐಹಿಕ ಅವಶ್ಯಕತೆಗಳ  ಮಿತಿಯಲ್ಲಿರುತ್ತಿದ್ದರು. ಸಾವಿಗೆ ಕೂಡ ಅಂಜದೇ, ಶಾಶ್ವತವಾದ ಆಧ್ಯಾತ್ಮಿಕ ಹಾಗೂ ಸತ್ಯದ ಹುಡುಕಾಟದಲ್ಲಿ, ತೊಡಗುವುದೇ ಅವರ  ಮುಖ್ಯ ಗುರಿಯಾಗಿತ್ತು.


" ನೆಮ್ಮದಿಯ ಬದುಕಿಗೆ ಹಣ ಮುಖ್ಯ ನಾ, ಸಂಬಂಧಪಟ್ಟ ಸಂಬಂಧಗಳು ಮುಖ್ಯ"?


  "ತಂದೆಗೆ ತಕ್ಕ ಮಗ ಆಗುವುದು ಯಾವಾಗ??!"

            ತಂದೆ-ತಾಯಿ ತಾವು ಸಾಕಿದ ಮಗನನ್ನು ಮಮತೆಯಿಂದ ಬೆಳೆಸಿದ್ದರು,ವಿದ್ಯಾಭ್ಯಾಸವನ್ನು ಕೂಡಾ  ಉತ್ತಮ ಗುಣಮಟ್ಟದಲ್ಲಿ ಕೊಡಿಸಿದರು. ಮಗನೂ ಸಹ ಕಷ್ಟಪಟ್ಟು    ಓದಿ, ವಿಧೇಯನಾಗಿ ನಡೆದು, ವಿಧ್ಯಾಭ್ಯಾಸ ಮುಗಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದನು, ಒಂದು ಉತ್ಕೃಷ್ಟ ಕಂಪನಿಯಲ್ಲಿ ಕೆಲಸವೂ ಕೂಡ ಹುಡುಕಿಕೊಂಡು ಬಂತು, ಆ ಮೊದಲನೇ ಸಂಬಳವೂ ಸಹ ಅವನ ಕೈ ಸೇರಿತು .

                 ತನ್ನ ಮೊದಲ ಸಂಬಳವನ್ನು ತಾಯಿಯ ಕೈಗೆ ಕೊಟ್ಟು ನಮಸ್ಕರಿಸಿದ, ತಾಯಿಗೆ ತುಂಬಾ ಖುಷಿಯಾಯಿತು. ಅವಳು ಒಂದು ಕ್ಷಣ ಆಲೋಚಿಸಿ, ಮೊದಲು ಇದನ್ನು ನಿಮ್ಮ ತಂದೆಯ ಕೈಗೆ ಕೊಡು ಎಂದಳು ಆಗ ಮಗನು ತಾಯಿಯ ಮಾತು ಕೇಳಿಸಿಕೊಂಡುರು ಸಹ, ಕಿವಿಗೆ ಕೇಳಿದರೂ ಕೇಳದಂತೆ ಇದ್ದನು,ಮತ್ತೆ ಅದೇ ಮಾತು ತಾಯಿಯು ಹೇಳಿದ್ದಳು, ತಂದೆಯ ಕೈಗೆ ಕೊಡುವಂತೆ ಜೋರಾಗಿ ಹೇಳಿ,ಆ ಹಣವನ್ನುಮರಳಿ ಮಗನ ಕೈಗೆ ನೀಡಿದಳು.

                 ಆಗ ಮಗನು, ಇಲ್ಲ ಅಮ್ಮ ನಾನು ಕೊಡುವುದಿಲ್ಲ ಎಂದನು.ಯಾಕೆ ಈ ರೀತಿ ಹೇಳತ್ತೀಯ ಮಗು, ಹೇಳಬಾರದು ಕಂದಾ ಆ ರೀತಿ ಎಂದಳು. ನನ್ನಿಂದ ಸಾಧ್ಯವಿಲ್ಲ!!ಎಂದನು. ಇದರಿಂದ ತಾಯಿಗೆ ಸಿಟ್ಟು ಬಂದಿತು,ಇದುವರೆಗೆ ವಿಧೇಯನಾಗಿದ್ದ ಮಗನ ಈ ವರ್ತನೆಗೆ ನೊಂದಳು, ಬೆಳೆದ ಮಗ ಮುಂದೆ ಮನೆಯ ಜವಾಬ್ಧಾರಿ ಹೊರುವ ಈತ ಹೀಗೇಕೆ ???? ಎಂದು ಮನದಲ್ಲಿಯೇ ಸಂಕಟ ಮಾಡಿಕೊಂಡಳು. ಕೊನೆಗೆ ಏನಾಯಿತೋ ಏನೋ, ಮಗನೆಂದು ನೋಡದೆ ತಕ್ಷಣವೇ ಕಪಾಳಕ್ಕೆ ಚಟಾರ್ ಎಂದು ಭಾರಿಸಿದಳು. ಕೋಪದಿಂದ ಬೈದಳು ಹಾಗೆ ಹೀಗೆ ಅಂದಳು. ಮುಂದುವರೆದು,ಮೊದಲ ಸಂಬಳ ತೆಗೆದುಕೊಂಡ ಕೂಡಲೆ ನೀನು ದೊಡ್ಡವನಾದಿಯೇನೋ. ಬಹಳ ದೊಡ್ಡ ವ್ಯಕ್ತಿ ಆಗಿಬಿಟ್ಟಿಯೇನೋ,ಛೇ!, ಎಂದು ಮೂದಲಿಸಿದಳು.
ತಂದೆಗೆ ಕೊಡು ಎಂಬ ನನ್ನ  ಮಾತನ್ನು ಸಹ ದಿಕ್ಕರಿಸಿರುವಿ. ಇದೇನಾ ನೀನು ಇದುವರೆಗೂ ಕಲಿತುಕೊಂಡ ಸಂಸ್ಕಾರ ಎಂದು ಬೈದಳು.

               ಮಗನು ತನ್ನ ಕೆನ್ನೆಯನ್ನು ಸವರಿಕೊಳ್ಳತ್ತಾ ಕಣ್ಣಿಂದ ಸಿಡಿದ ಹನಿಯನ್ನು ಅಂಗೈಯಿಂದ  ಒರೆಸಿಕೊಳ್ಳುತ್ತಾ  ದುಃಖದಿಂದ ತಾಯಿಗೆ ಹೇಳುತ್ತಾನೆ. ಇಲ್ಲ ಅಮ್ಮ , ಅಮ್ಮ ನನ್ನ ತಂದೆಯ ಕೈ ಯಾವತ್ತೂ ಮೇಲೆಯೇ ಇರಬೇಕು,ಕೆಳಗೆ ಕೈ ಚಾಚ ಕೂಡದು ಹಾಗೆಯೇ ಮೇಲೆಯೇ ಇರಲಿ ಎಂಬುದೇ ನನ್ನ ಅದಮ್ಯ ಆಸೆ ಅಂದನು. ಇದುವರೆಗೂ ಅವರಿಂದ ನಾನು ಪಡೆದುಕೊಳ್ಳುವಾಗ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಈಗ ನಾನು ಅವರಿಗೆ ಇದನ್ನು ಕೊಡುವಾಗ ಅವರ ಕೈ,ನನ್ನ ಕೈ- ಕೆಳಗೆ ಬರುತ್ತದೆ ಅದು ನನಗಿಷ್ಟವಿಲ್ಲ, ಎಂದೆಂದೂ  ಸರ್ವಕಾಲಕ್ಕೂ ನನ್ನ ತಂದೆಯ ಕೈ ಮೇಲೆಯೇ ಇರಬೇಕು.
                 ನೀವೇ ಇದನ್ನು ಅಪ್ಪನಿಗೆ  ಕೊಟ್ಟು ಬಿಡಿ ಅವರಿಗೆ ಹಣ ಕೊಡುವಷ್ಟು ಯಾವ ಅರ್ಹತೆಯೂ ನನಗಿಲ್ಲ. ನೀವು ಕೊಡಿ,ನಾನು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವೆ' ಎಂದನು. ತಾಯಿಗೆ ದಿಗ್ಭ್ರಮೆಯಾಯಿತು, ಮೂಖ ಸ್ತಂಭೂತಳಾಗಿ ನಿಂತು ಬಿಟ್ಟಳು.

      ಕೊಠಡಿಯ ಒಳಗೆ ಕುಳಿತು ತಾಯಿ-ಮಗನ ಸಂಭಾಷಣೆಯನ್ನು ಕೇಳಿಸಿ ಕೊಳ್ಳತ್ತಿದ ತಂದೆ,ತಕ್ಷಣ ಹೊರಬಂದು ತನ್ಮ ಮಗನನ್ನು ನೋಡಿದ ತಕ್ಷಣವೇ ಕಣ್ಣಲ್ಲಿ ನೀರು ತುಂಬಿ ಬಂತು ಅದು ಆನಂದ ಭಾಷ್ಬ. ತನ್ನ ಎರಡು ಬಾಹುಗಳಿಂದ ಮಗನಿಗೆ ಬಿಗಿಯಾದ ದೀರ್ಘಾಲಿಂಗನ ಮಾಡಿದನು. ತನ್ನ ಮಗ ತನ್ನನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವನಲ್ಲ ಎಂದು ಹೆಮ್ಮೆಯಿಂದ ಮಗನ ಕಣ್ಣಿನೊಳಗೆ ತನ್ನ ಬಿಂಬವನ್ನು ನೋಡಿ ಪುಳಕಿತನಾದನು, ಮನದಲ್ಲಿ ಹೆಮ್ಮೆಯ ಸಾರ್ಥಕ ಭಾವ ತುಂಬಿ ಬಂದಿತು. ಮೈ ಮನಸ್ಸು ಹಗುರವಾಗಿ ಗಾಳಿಯಲ್ಲಿ ತೇಲಿದ ಅನುಭವ ಕೈಯಲ್ಲಿ ಮೋಡ ಹಿಡಿದ ಅನುಭವ ಆ ತಂದೆಗೆ ತಕ್ಕ ಮಗ ಎಂಬ ಸಾರ್ಥಕ ಭಾವನೆ ...

!!! "ಸಾರ್ಥಕ ಬದುಕು ಬದುಕಿದ್ದಾಗಲೇ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುವುದು" !!!

🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤
 

"ಹಣಕ್ಕೆ ಹೆಣ ಕೂಡ ಬಾಯಿ ಬಿಡುತ್ತದೆ ಅತಂಹದರಲ್ಲಿ ಈ ಸಾಮಾನ್ಯ ಮನುಷ್ಯನ ಗತಿ ಏನು"?

               !!!  ʼಯಾವು ದಿನ ನೀನು ಸ್ಥಿರವಾಗಿ ನೀಲ್ಲುವೇ ತಾಯಿʼ?

                              ಹಣವಂತರಲ್ಲಿಯು ಕೂಡ ಸ್ಥಿರವಾಗಿ ನಿಲ್ಲದ ನೀನು, ಬಡವರಲ್ಲಿ ಬಂದು ಶ್ರೀಮಂತರನ್ನಾಗಿ ಮಾಡಿ ಅಲ್ಲಿಯು ನಿಲ್ಲದ ನೀನು ಮತ್ತೇ ಯಾರಲ್ಲಿ ಸ್ಥಿರವಾಗಿ ನಿಲ್ಲತ್ತೀಯಾ ತಾಯಿ ಅದೇ ನಿನ್ನ ಪವಾಡ, ಹೀಗಾಗಿ ಎಲ್ಲಾರ ಮನಸ್ಸಿನಲ್ಲಿ ನೀನು ಶಾಸ್ವತವಾಗಿ ನೆಲೆ ನಿಂತಿದ್ದಿಯಾ ತಾಯಿ,ನಿನ್ನ ಹುಡುಕುವುದೇ ಜೀವನ ಪರ್ಯಂತ ಒಂದು ಕೆಲಸವಾಗಿದೆ ಅಮ್ಮ ..

    "ಲಕ್ಷ್ಮೀ ನೀನು ಯಾರ ಹತ್ತೀರ ಸ್ಥಿರವಾಗಿ ನಿಲ್ಲುವೇ"?

                           ಎಲ್ಲರೂ ವರಮಹಾಲಕ್ಷ್ಮಿ ಹಬ್ಬದ ಸಡಗರಲ್ಲಿದ್ದೀರ ಅದು ನನಗೆ ತುಂಬಾ ಸಂತೋಷ. ಆದರೆ ನೀವೆಲ್ಲರೂ ಈ ಹಬ್ಬವನ್ನು ಆಚರಿಸುವ ಮುನ್ನ  ಯಾವುದೇ ಒಂದು ವಿಚಾರವನ್ನು ತಿಳಿದು ಆಚರಿಸಿ ಆವಾಗಲೇ ಈ ಹಬ್ಬಕ್ಕೆ ಒಂದು ಬೆಲೆ, ಈ ವರಮಹಾಲಕ್ಷ್ಮಿ ಹಬ್ಬವೂ ಇತ್ತಿಚಿನ ದಿನಗಳಲ್ಲಿ ತಾಯಿ ಮಹಾಲಕ್ಷ್ಮೀಯ ಸೇವೆಗಿಂತ ಡಂಭಾಚಾರವೇ ಅತಿಯಾಯಿತು ಅನಿಸುತ್ತಿದೆ ಅಲ್ಲವೇ..? ಈ ಹಬ್ಬದ ಆಚರಣೆಗಿಂತ ಬರೀ ಅಡಂಬರವೇ ತುಂಬಿ ತುಳುಕುತ್ತಿದೆ. ನಿಜವಾದ ಹಬ್ಬದ ಅರ್ಥವೇ ಅನರ್ಥವಾಗುತ್ತಿದೆ,ಮೊದಲು ನಾವು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ನಮಗೆ ತಿಳಿವಳಿಕೆ ಇರಬೇಕು. 

                         ಹಳೆಯ ಕಾಲದಲ್ಲಿ ಕಳಸವನ್ನು ಇಟ್ಟು ಪೂಜೆ ಸಲ್ಲಿಸುತ್ತಿದ್ದರು ಆದರೆ ಆ ಪದ್ಧತಿ ಇವಾಗ ಮಾಯವಾಗುತ್ತಿದ್ದೆ, ಆ ಪದ್ದತಿಯು ಈಗ ಪ್ಲಾಸ್ಟಿಕ್ ಗೊಂಬೆಗಳಿಗೆ ಅಲಂಕಾರ ಮಾಡುವ ಮೂಲಕ ಆ ಪೂಜೆ ಪದ್ದತಿ ಎಷ್ಟು ಸರಿ..?  ಯಾಕೆ ಈ ಸಮಾರಂಭ ಈ ರೀತಿ  ಆಚರಣೆಗೆ ಒಳಪಡುತ್ತಿದೆ , ಅದು ನನಗೆ ತುಂಬಾ ಬೇಜಾರು ತಂದಿದೆ , ಸುಖ- ಸುಮ್ಮನೆ ಈ ರೀತಿ ಹುಚ್ಚು ಭ್ರಮೆಯನ್ನು ಬಿಟ್ಟುಬಿಡಿ, ಅಡಂಬರದಿಂದ ಪೂಜೆ ಮಾಡಿದರೆ ಮಾತ್ರ ದೇವರು ಒಲಿಯುತ್ತಾನೆ ಎಂಬ ಭಾವನೆ ನಿಮ್ಮಲ್ಲಿ ಮೂಡಬಾರದು, ದೇವರು ಒಲಿಯುವುದು ಅನನ್ಯ ನಿಶ್ಕಲ್ಮಶ ಭಕ್ತಿಗೆ ಮಾತ್ರ. ಯಾರು ಅಕ್ಕ ಪಕ್ಕದ ಮನೆಯವರು ಮಾಡುತ್ತಾರೆ ಎಂದು ಪೂಜೆ ಮಾಡಲುಹೋಗಬೇಡಿ ಅದರಿಂದ ನಿಮಗೆ ಯಾವುದೆ ಪ್ರಯೋಜನವಿಲ್ಲ, ಸುಖ-ಸುಮ್ಮನೆ ಸಾಲಸೋಲ ಮಾಡಿ ದುಂದುವೆಚ್ಚ ಮಾಡಿ ಜೀವನದಲ್ಲಿ ಕಷ್ಟ ತಂದು ಕೊಳ್ಳಬೇಡಿ. 

                          ಯಾರೇ ಆಗಲಿ ಮೊದಲು ಆ ಆಚರಣೆ ಬಗ್ಗೆ ತಿಳಿದುಕೊಳ್ಳಿ ನಮ್ಮ ಮನೆಗಳಲ್ಲಿ ಆಚರಣೆ   ಪದ್ಧತಿಯಲ್ಲಿ ನಡೆದುಕೊಂಡು ಬಂದಿದ್ದರೆ  ಅದನ್ನು ನೀವು ಮುಂದುವರಿಸಿ ಹಾಗೆ ಈ ಎಲ್ಲಾ ಆಚರಣೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಪಾಲಿಸಿಕೊಂಡು ಹೋಗಿ ಅದು ತುಂಬಾ ಸಂತೋಷ.ಸರಿಯಾಗಿ ಆಲೋಚಿಸಿ ಅವಲೋಕಿಸಿ ಆರಂಭಿಸಿ ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿಯನ್ನು ನಾವು ನೀಡದಿದ್ದರೆ ಸುಖ-ಸುಮ್ಮನೆ ಅವರನ್ನು ಗೊಂದಲಕ್ಕೆ ನೂಕಬೇಡಿ. ಲಕ್ಷ್ಮೀ ಎಂದರೇ ಹಣ ಇದ್ದರೆ ಮಾತ್ರ ಅನ್ನುವ ಹಾಗೇ ಆಗಬಾರದು ಇಲ್ಲ-ಸಲ್ಲದ ಗೊಂದಲಕ್ಕೆ ತಳಬೇಡಿ.ಆರೋಗ್ಯ ಸಮೇತ ಐಶ್ವರ್ಯ ಬರಬೇಕು ಅದರ ಜೊತೆಗೆ ನಾವೂ ಗಳಿಸಿದ ಸಂಪತ್ತು ನಾವು ಅನುಭವಿಸಬೇಕು, ಹಾಗೆ ಅದು ಸತ್ಕಾರ್ಯಕ್ಕೆ ಉಪಯೋಗವಾಗಬೇಕು ಅದನ್ನು ಬಿಟ್ಟು ಬೇರೆಯವರ ಪಾಲದರೆ ಏನು ಪ್ರಯೋಜನೆ? 

                          ಅದು ಬಿಟ್ಟು ದುಷ್ಚಟಗಳಿಗೆ ಅನಾವಶ್ಯಕವಾಗಿ, ಅಧರ್ಮ ಕಾರ್ಯಗಳಿಗೆ ನಿಮ್ಮ ಬುದ್ದಿ  ವಿನಿಯೋಗವಾದರೇ ಏನು ಉಪಯೋಗ ನೀವೆ ಹೇಳಿ? ಎಲ್ಲರೂ ಹೇಳುತ್ತಾರೆ ಅವರಿಗೆ ಏನು ಕಡಿಮೆ ಅವರ ಹತ್ತಿರ ಇರುವ ಆಸ್ತಿ ಏಳು ತಲೆಮಾರಿಗೆ ಕುಳಿತು ತಿನ್ನುವಷ್ಟು ಇದೆ ಅಂತ ಹೇಳತ್ತಾರೆ, ಹಾಗಂತ ಒಂದು ಸಲ ಯೋಚಿಸಿ ನೋಡಿ  ಒಮ್ಮೆ ನಮ್ಮ ನಮ್ಮ ಮನೆತನಗಳಲ್ಲಿ ಯಾರಾದರೂ ಸಂಪಾದಿಸಿದ ಸಂಪತ್ತು ಏಳು ತಲೆಮಾರುಗಳ ತನಕ ಉಳಿದುಕೊಂಡು ಬಂದಿದೆಯಾ...? ಚಿಂತೆ ಬೇಡ ಒಂದು ಬಿಲ್ವಪತ್ರೆ ಆ ಲಕುಮಿಗೆ ಇಟ್ಟು ಆ ದೇವಿಗೆ ಶುದ್ದವಾಗಿ ಅನ್ನ ಮಾಡಿ  ಅದಕ್ಕೆ ಸ್ವಲ್ಪ ಹಸುವಿನ ತುಪ್ಪ ಹಾಕಿ ನೈವೇದ್ಯ ಮಾಡಿ ಅದೇ ಆ ಮಹಾಲಕ್ಷ್ಮಿಗೆ ಪರಮ ಪ್ರಸಾದ.

                          ಆ ತಾಯಿಗೆ  ಭಕ್ತಿಯಿಂದ ಪೂಜಿಸಿರಿ ನಿಮ್ಮ ಕೋರಿಕೆಯನ್ನು ಪೊರೈಸಿಕೋಳ್ಳಿ. ಈ ಒಂದು ಮಂತ್ರದಿಂದ ಸಕಲವು ಸಿದ್ದಿ ಪ್ರಾಪ್ತಿಯಾಗುವುದು ಅದೇ "ಶ್ರೀ ಮಹಾಲಕ್ಷ್ಮಿಯ ಮಹಾಮಂತ್ರ" "ಶ್ರೀಂ" ಈ ಬೀಜಾಕ್ಷರಿ ಮಂತ್ರವನ್ನು ಯಾರು ಯಾವಾಗ ಬೇಕಾದರೂ ಹೇಳಬಹುದು. ಪ್ರತಿದಿನ  ಈ ಮಹಾಮಂತ್ರ ನಿಮ್ಮ ದಿನನಿತ್ಯ ಕೆಲಸ ಮಾಡುವಾಗ ಹಾಗೂ ಮನೆಯಲ್ಲಿ ಇದ್ದರು ಕೂಡ ನೀವು ಮಾಡಬಹುದು. ಈ ಆಚರಣೆಗಳು ಯಾವುದೇ ಕಾರಣಕ್ಕು ಅಸಡ್ಡೆ ಮಾಡಬೇಡಿ ಸ್ನೇಹಿತರೆ ನಿಮಗೆ ಎಲ್ಲಾವು ದೊರೆಯುತ್ತದೆ. " ಯಶ್ಸಸು ನಿಮಗೆ ಕಟ್ಟಿಟ್ಟ ಬುತ್ತಿ"...

                         !!! "ವರ ಮಹಾಲಕ್ಷ್ಮೀ ಹಬ್ಬದ ಶುಭಾಷಯಗಳು"!!!


FlipKart ಕಂಪನಿ- ಭಾರತೀಯ ಇ-ಕಾಮರ್ಸ್ ಉದ್ಯಮದಲ್ಲಿ 48% ಮಾರುಕಟ್ಟೆಯೇ ಪಾಲುದಾರ- "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್"

           "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್   ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್ * ಸ್ಥಾಪಕರು : ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್  (...