"ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪನಿ"
"ಬದುಕುಗಳು ಕಟೀಕೋಳ್ಳುವು ಪ್ಯಾಕ್ಟಾರಿ, ಉದ್ಯೋಗಗಳು ಸೃಷ್ಟಿ ಮಾಡುವು ಸ್ವರ್ಗ ಹಾಗೂ ಸುವ್ಯವಸ್ಥೆಯ ಸಾಗರವಾಗಿದೆ",
ಕಂಪನಿಯ ಸ್ಥಾಪನೆಯು: 1981 ಜುಲೈ 02 -ಪುಣೆ (ಮಹಾರಾಷ್ಟ್ರ).
ಸಂಸ್ಥಾಪಕರು : ಎನ್ ಆರ್ ನಾರಾಯಣ ಮೂರ್ತಿ,
- ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಎಸ್ ಡಿ ಶಿಬುಲಾಲ್, ಕೆ. ದೀನೆಶ್, ಎನ್ ಎಸ್ ರಾಘವನ್, ಅಶೋಕ ಅರೋರಾ.
ಪ್ರಧಾನ ಕಛೇರಿ: ಬೆಂಗಳೂರು (ಕರ್ನಾಟಕ)
ಪ್ರಸ್ತುತ ಆದಾಯ : 2024 ರ ಪ್ರಕಾರ - 158,381 ಕೋಟಿ ರೂಪಾಯಿ .
ವೆಬ್ ಸೈಟ್: infosys.com
ವಿಶ್ವದ್ಯಾಂತ ಈ ಕಂಪನಿಯ ಶಾಖೆಗಳು ಇವೆ, ಈ ಕಂಪನಿಯು ಇಂಜಿನಿಯರ್ ಗಳ ಪಾಲಿಗೆ ಅನ್ನ ನೀಡುವ ಅನ್ನದಾತವಾಗಿದೆ. ಹೀಗಾಗಿ ಈ ಕಂಪನಿಯಲ್ಲಿ ಸೂಮಾರು 3,17,240 ಉದ್ಯೋಗಿಗಳು 2024 ರ ಪ್ರಕಾರ ಇದ್ದಾರೆ. ಮೊದಲು ಈ ಕಂಪನಿಯಲ್ಲಿ ಕೇವಲ 07 ಉದ್ಯೋಗಿಗಳಿಂದ ಪ್ರಾರಂಭವಾಗಿ ಈಗ ಈ ಕಂಪನಿಯು ಶಕ್ತಿ ಪ್ರದರ್ಶನ ಮಾಡಿ ತೋರಿಸಿದೆ. ಕೇವಲ 250 $ ಆರಂಭಿಕ ಬಂಡವಾಳದಿಂದ ಪ್ರಾರಂಭವಾದ ಕಂಪನಿ ಇಂದು 158,381 ಕೋಟಿಗೆ ತಲುಪಿದೆ. ಈ ಕಂಪನಿಯು ಮೊದಲು ಹಲವಾರು ಹೆಸರುಗಳಿಂದ ಗುರುತಿಸಿಕೊಂಡ ಕಂಪನಿಯಾಗಿದೆ.
- ಇನ್ಪೋಸಿಸ್ ಕನ್ಸಲ್ಟೆಂಟ್ ಕಂಪನಿ.
- ಇನ್ಪೋಸಿಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್.
- ಇನ್ಪೋಸಿಸ್ ಟೇಕ್ನಾಲಜೀಸ್ ಲಿಮಿಟೆಡ್.
- ಇನ್ಪೋಸಿಸ್.
ಮೊದಲು ಈ ಕಂಪನಿಯ ಷೇರು IPO ಬೆಲೆ 95 ರೂಪಾಯಿ ಆಗಿತ್ತು, 1993 ರಲ್ಲಿ 145 ರೂಪಾಯಿ 1999 ರಷ್ಟರಲ್ಲಿಯೆ 8100 ರೂಪಾಯಿ ಆಗಿ ಬೆಳೆದು ನಿಂತಿತ್ತು. ಆ ಕಂಪನಿಯ ಷೇರು ಇಂದಿಗೂ ತುಂಬಾ ಬೆಲೆಯಲ್ಲಿ ಮಾರಾಟವಾಗುತ್ತೀದೆ. ಈ ಕಂಪನಿಯ ಷೇರು ಖರೀದಿಸಲು ವೀದೆಶದ ಶ್ರೀಮಂತ ವ್ಯಕ್ತಿಗಳು ಹಾಗೂ ಸಾಫ್ಟ್‌ವೇರ್ ಕಂಪನಿಗಳು ಖರೀದಿಸಲು ಮುಂದಗಿರುತ್ತಾರೆ, ಈ ಕಂಪನಿಯ ವಿಶೇಷತೆ ಹೊಸ ಸಂಶೋಧನೆಗಳಿಗೆ ಹೆಸರುವಾಸಿಯಾಗಿದೆ. ಹಲವಾರು ಕಂಪನಿಗಳಿಗೆ ಹೋಲಿಸಿದರೆ ಈ ಕಂಪನಿಯು ತುಂಬಾ ಕ್ರೀಯಶೀಲತೆಯಿಂದ ಕೊಡಿರುವು ಕಂಪನಿಯಾಗಿದೆ.
ಈ ಕಂಪನಿ ಸಹ-ಸಂಸ್ಥಾಪಕರು ಹಗಲು-ಇರುಳು ಎನ್ನದೆ ಸೇವೆ ಸಲ್ಲಿಸಿದ್ದಾರೆ, ಅವರ ಪರಿಶ್ರಮಕ್ಕೆ ತಕ್ಕ ಗೌರವವು ನೀಡಿದೆ ಹಾಗೆ ಈ ಕಂಪನಿಯ ಮುಖ್ಯಸ್ಥರಾದ ಎನ್ ಆರ್ ನಾರಾಯಣಮೂರ್ತಿ ಸರ್ ನಮ್ಮ ರಾಜ್ಯದವರು ಎಂಬುವುದು ತುಂಬಾ ಸಂತೋಷವಾಗುತ್ತದೆ ಯಾಕೆ ಈ ಮಾತು ಹೇಳಲು ಬಯಸುತ್ತೇನೆ ಅಂದರೆ ಅವರ ಪರಿಶ್ರಮದಿಂದ ಕಟ್ಟಿರುವು ಬೃಹತ ಕಂಪನಿ ಇದು ಒಬ್ಬ ಸಾಮಾನ್ಯ ಮನುಷ್ಯ ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಕಟ್ಟಲು ಸಾದ್ಯಾನಾ ? ಎಂಬ ಪ್ರಶ್ನೆ ಮೂಡುತ್ತದೆ. ಇವರ ಪರಿಶ್ರಮ ನೋಡಿದಾಗ ಎಂಥ ಸೋಮಾರಿಗಳಲ್ಲಿಯು ಇವರು ಮಾಡಿರುವ ಸಾಧನೆ ʼಭೇಷ್ ʼ ಎಂದು ಹುಬ್ಬು ಏರಿಸುವಂತೆ ಮಾಡುತ್ತದೆ.
ಈ ಕಂಪನಿಯು ಕೇವಲ ಅವರ ಶ್ರಮದಿಂದ ಕಟ್ಟಿರುವ ಕಂಪನಿ ಅಲ್ಲ ಅದರ ಜೊತೆಗೆ ಪ್ರೀತಿಯಿಂದ ನಿರ್ಮಾಣವಾದ ಬೃಹತ ಸೌದವಾಗಿದೆ, ಯಾಕೆ ಈ ಮಾತು ಹೇಳಲು ಬಯಸುತ್ತೇನೆ ಅಂದರೆ ಎನ್ ಆರ್ ನಾರಾಯಣಮೂರ್ತಿ ರವರ ಧರ್ಮಪತ್ನಿಯಾದ ಸುಧಾಮೂರ್ತಿ ಅಮ್ಮ ನಮ್ಮ ರಾಜ್ಯದ ಹೇಮ್ಮೆ, ಈಗ ಇವರು ಪ್ರಸ್ತುತ ಕೇಂದ್ರದ ರಾಜ್ಯಸಭಾ ಸದಸ್ಯರು, ಇವರ ಸಹಾಯದಿಂದಲೇ ಈ ಕಂಪನಿಯು ಈ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ಈ ಮಹಾತಾಯಿ ಸಾಮಾಜಿಕವಾಗಿ ಹಲವಾರು ಸಾಮಾಜಿಕ ಕೆಲಸಗಳಿಂದ ಬಡವರಿಗೆ ಹಲವಾರು ಯೋಜನೆಗಳ ಮೂಲಕ ಬಡವರ ಪಾಲಿಗೆ ದೇವತೆಯಾಗಿದ್ದಾರೆ. ಹೀಗಾಗಿ ಜನಪರ ಕೆಲಸಗಳಿಗೆ ಹೆಸರಾಗಿದ್ದಾರೆ.
ಇವರು ರಾಜ್ಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಈ ದಂಪತಿಗಳು ತುಂಬಾ ಸರಳತೆಯಿಂದ ಜೀವನ ನಿರ್ವಹಿಸುತ್ತೀದ್ದಾರೆ, ಯಾವುದೇ ಸಂದರ್ಭದಲ್ಲಿ ಅವರು ದೃಡ ನಿರ್ಧಾರದಿಂದ ಸರಿಯಾಗಿ ಪರಿಹಾರವನ್ನು ಹುಡುಕುವರು ಹೀಗಾಗಿ ಈ ದಂಪತಿಗಳು ವಿಶ್ವಕ್ಕೆ ಮಾದರಿಯಾಗಿ ಕರ್ತವ್ಯವೇ ದೇವರ ಎಂಬಂತೆ ನಿರ್ವಹಿಸುತ್ತೀದ್ದಾರೆ. ಇವರನ್ನುಗುರುತಿಸಿ ವಿಶ್ವದಲ್ಲಿ ಹಲವಾರು ಪ್ರಶಸ್ತಿಗಳು ಅವರಿಗೆ ದೊರಕಿರುತ್ತವೆ.