"ಟಾಟಾ ಗ್ರೂಪ್ ಆಫ್ ಕಂಪನಿ"-
"ಉದ್ಯಮ ಜಗತ್ತೀನ ಕೇಂದ್ರಬಿಂದು ಈ ಕಂಪನಿ, ಆ ಜಗತ್ತೀನ ಒಡೆಯೆ- ರತನ್ ಟಾಟಾ ಜೀ".
ಕಂಪನಿಯ ಸ್ಥಾಪನೆ : ೧೮೬೮.
ಸ್ಥಾಪಕರು: ಜೆಮ್ಸೆಟ್ಜಿ ಟಾಟಾ
ಪ್ರಧಾನ ಕಛೇರಿ: ಬಾಂಬೆ ಹೌಸ್, ಮುಂಬೈ -ಮಹಾರಾಷ್ಟ್ರ-ಭಾರತ
ಆದಾಯ: ಯುಎಸ್ ಡಾಲರ್$೪೦೩ ಶತಕೋಟಿ ಸಂಯೋಜಿತ ಮಾರುಕಟ್ಟೆ ಬಂಡವಾಳದೊಂದೊಗೆ ಕೆಲಸ ಮಾಡುತ್ತದೆ.
ಅಂಗಸಂಸ್ಥೆಗಳು: ೩೫
ಪೋಷಕ ಸಂಸ್ಥೆ: "ಟಾಟಾ ಸನ್ಸ್"
ವೆಬ್ ಸೈಟ್: www.tata.com (http://www.tata.com/)
ಈ ಟಾಟಾ ಕಂಪನಿಯು ಹಲವಾರು ಕ್ಷೇತ್ರಗಳಲ್ಲಿ ಹುದ್ದೆಗಳನ್ನು ಸೃಷ್ಠಿ ಮಾಡಿರುವು ಬೃಹತ ಕಂಪನಿಯಾಗಿದೆ. ಈ ಕಂಪನಿಯನ್ನು ದೊಡ್ಡ ಮಟ್ಟಕ್ಕೆ ಕೊಂಡಯ್ಯದಿರುವ ಕೀರ್ತಿ ಈ ಕೆಳಗಿನ ಅಧ್ಯಕ್ಷರಿಗೆ ಸಲ್ಲುತ್ತದೆ
೦೧.ಜೆಮ್ಸೆಶೆಡ್ ಜೀ ಟಾಟಾ -೧೮೬೮-೧೯೦೪.
ಜನನ:೧೮೩೯
* ಇಂಡಿಯನ್ ಇನ್ಸಟ್ಯೂಟ್ ಆಫ್ ಸೈನ್ಸ್ ಕೇಂದ್ರ ಕಛೇರಿ : ಬೆಂಗಳೂರನಲ್ಲಿ ಸ್ಥಾಪಿಸಿದ್ದರು.
* ದಿ ತಾಜ್ ಮಹಲ್ ಹೋಟೆಲ್ : ಮುಂಬೈ ನಲ್ಲಿ ಸ್ಥಾಪಿಸಿದ್ದರು.
೧೯೦೩ ರಲ್ಲಿ:ಸ್ಥಾಪನೆ
* ೧೮೭೪ ರಲ್ಲಿ ಹತ್ತಿಗಿರಣಿ : ನಾಗಪುರದಲ್ಲಿ ಸ್ಥಾಪಿಸಿದ್ದರು.ಸೂಚನೆ:
$ ಆರಂಭದಲ್ಲಿ, ಟಾಟಾ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರಿಂದ ತೀವ್ರ ಪ್ರತಿರೋಧವನ್ನು ಎದುರಿಸಿತು, ಅವರು ಹಿರಿಯ ಟಾಟಾ ಅವರ ಅಧಿಕಾರಾವಧಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ಹೊಂದಿದ್ದರು.
$ ಅಧಿಕಾರವನ್ನು ಕ್ರೋಢೀಕರಿಸಲು ವಿನ್ಯಾಸಗೊಳಿಸಿದ ಹಲವಾರು ನೀತಿಗಳನ್ನು ಟಾಟಾ ಜಾರಿಗೆ ತಂದಿತು, ಇದರಲ್ಲಿ ನಿವೃತ್ತಿ ವಯಸ್ಸಿನ ಅನುಷ್ಠಾನ, ಅಂಗಸಂಸ್ಥೆಗಳು ನೇರವಾಗಿ ಗುಂಪು ಕಚೇರಿಗೆ ವರದಿ ಮಾಡುತ್ತವೆ.
$ ಟಾಟಾ ಗುಂಪಿನ ಬ್ರ್ಯಾಂಡ್ ಅನ್ನು ನಿರ್ಮಿಸಲು ಅಂಗಸಂಸ್ಥೆಗಳು ತಮ್ಮ ಲಾಭವನ್ನು ನೀಡಬೇಕೆಂದು ಒತ್ತಾಯಿಸಿದರು.
$ ಟಾಟಾ ನಾವೀನ್ಯತೆಗೆ ಆದ್ಯತೆ ನೀಡಿತು ಮತ್ತು ಕಿರಿಯ ಪ್ರತಿಭೆಗಳಿಗೆ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಟ್ಟಿತು.
$ ಅವರ ನಾಯಕತ್ವದಲ್ಲಿ, ಅಂಗಸಂಸ್ಥೆಗಳ ನಡುವಿನ ಅತಿಕ್ರಮಿಸುವ ಕಾರ್ಯಾಚರಣೆಗಳನ್ನು ಕಂಪನಿ-ವ್ಯಾಪಕ ಕಾರ್ಯಾಚರಣೆಗಳಾಗಿ ಸುವ್ಯವಸ್ಥಿತಗೊಳಿಸಲಾಯಿತು.
$ ಜಾಗತೀಕರಣವನ್ನು ತೆಗೆದುಕೊಳ್ಳಲು ಗುಂಪು ಸಂಬಂಧವಿಲ್ಲದ ವ್ಯವಹಾರಗಳಿಂದ ನಿರ್ಗಮಿಸಿತ
$ 21 ವರ್ಷಗಳಲ್ಲಿ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದರು.ಆದಾಯವು 40 ಪಟ್ಟು ಹೆಚ್ಚಾಗಿದೆ ಮತ್ತು ಲಾಭವು 50 ಪಟ್ಟು ಹೆಚ್ಚಾಗಿದೆ. ಅವರು ಕಂಪನಿಯನ್ನು ವಹಿಸಿಕೊಂಡಾಗ, ಮಾರಾಟವು ಅಗಾಧವಾಗಿ ಸರಕುಗಳ ಮಾರಾಟವನ್ನು ಒಳಗೊಂಡಿತ್ತು, ಆದರೆ ಅವರ ಅಧಿಕಾರಾವಧಿಯ ಕೊನೆಯಲ್ಲಿ, ಹೆಚ್ಚಿನ ಮಾರಾಟವು ಬ್ರ್ಯಾಂಡ್‌ಗಳಿಂದ ಬಂದಿತು.
ಈ ಕಂಪನಿ ಮಾಲೀಕರು ಆದ ರತನ್ ಟಾಟಾ ಜೀ ರವರು ಮಹಾನ್ ಮುತ್ಸದಿ, ಇವರು ಲೋಕೂಪಕಾರಿ ವ್ಯಕ್ತಿತ್ವ, ಯಾವುದೇ ಸಂದರ್ಭದಲ್ಲೂ ದೇಶ ಸೇವೆ ಈಶ ಸೇವೆ ಎಂಬಂತೆ ತಮ್ಮ ಜೀವನವನ್ನು ಸಾರ್ಥಕ ಭಾವದಿಂದ ಬದುಕಿ ಬಾಳಿದವರು.
ಇವರ ನಿಸ್ವಾರ್ಥ ಸೇವೆಯಿಂದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಸಲ್ಲುತ್ತದೆ ಆದರೆ ಇವರು ದೇಶಕ್ಕೆ ನೀಡಿದ ಕೊಡುಗೆ ಅಪಾರ, ದೇಶದ ಆರ್ಥಿಕ ಸ್ಥಿತಿ ಎದುರಾಗಿ ಬಂದರೆ ಇಡೀ ನನ್ನ ಆಸ್ತಿ ದೇಶ ಸೇವೆಗೆ ಸರ್ಮಪಿಸುತ್ತೇನೆ ಎಂದು ಹೇಳಿದವರು.
ಇವರು ಲೋಕೂಪಕಾರಿ ಕೆಲಸಗಳನ್ನು ಮಾಡಿರುವುದರಿಂದಲೇ ಬಡವರ ಪಾಲಿನ ನಾಯಕರು, ಹಾಗೆ ಸಾಮಾನ್ಯ ಮನುಷ್ಯನ ಕೂಡ ಕಾರ್ ನಲ್ಲಿ ಓಡಾಡಬೇಕು ಎಂಬ ಯೋಚನೆಯಿಂದ ನ್ಯಾನೋ ಕಾರ್ ನ್ನು ಪರಿಚಯಿಸುವ ಮೂಲಕ ಕೇವಲ 1 ಲಕ್ಷಕ್ಕೆ ದೊರೆಯುವು ಹಾಗೆ ಮಾಡಿದ್ದಾರೆ.
ರತನ್ ಜೀ ರವರ 4 ಸಿದ್ದಾಂತಗಳು:
1. ಹಳೆ ಬಟ್ಟೆ: ಹಳೇ ಬಟ್ಟೆಗಳನ್ನು ತೊಡುವುದರಿಂದ ನಮಗೆ ಯಾವುದೇ ಸಂಕುಚಿತ ಮನೋಭಾವ ಬರಕೂಡದು. ಯಾಕೆಂದರೆ ಅದರಿಂದ ನಮ್ಮ ವ್ಯಕ್ತಿತ್ವ ಹಾಳಾಗುವುದಿಲ್ಲ, ಅದು ಜೀವನದ ಒಂದು ಭಾಗ .
2. ಬಡವ ಸ್ನೇಹಿತ: ನನ್ನ ಸ್ನೇಹಿತ ಬಡವ ಎಂದು ಅದರಿಂದ ನೀವು ಸಂಕೋಚಕ್ಕೆ ಒಳಗಾಗಬೇಡಿ, ಹೆಮ್ಮೆಯಿಂದ ಹೇಳಿಕೊಳ್ಳಿ ಇವನು ನನ್ನ ಆತ್ಮೀಯ ಗೆಳೆಯ ಎಂದು ಪರಿಚಯಿಸುವ ಗುಣ ಬರಲಿ.
3. ವಯಸ್ಸಾದ ತಂದೆ-ತಾಯಿ: ನಿಮಗೆ ಇವರ ಬಗ್ಗೆ ತಾತ್ಸಾರ ಬೇಡ, ಇವರು ಇಲ್ಲ ಅಂದ್ರೆ ನೀವು ಈ ಪ್ರಪಂಚಕ್ಕೆ ಪರಿಚಯಿಸುವರು ಯಾರು? ಇವರಿಂದಲೇ ನೀವು ಎಂಬುದನ್ನು ಮರೆಯಬೇಡಿ.
4. ದಂಪತಿ: ಜೀವನದ ಕಷ್ಟ-ಸುಖದಲ್ಲಿ ಅರ್ಧಭಾಗವಾಗಿ ಬದುಕುವಳು ಹೆಂಡತಿ, ಅವಳ ಮನಸ್ಥಿತಿಯನ್ನು ನೋಡಿ ಬದುಕ ಬೇಕು ಅದೇ ಜೀವನ.
ಈ ಎಲ್ಲಾ ಸಿದ್ಧಾಂತಗಳು ರತನ್ ಜೀ ರವರು ಹೇಳಿದಂತೆ ಅಳವಡಿಸಿಕೊಂಡರೆ, ಒಬ್ಬ ಸಾಮಾನ್ಯ ಮನುಷ್ಯ ಶ್ರೀಮಂತ ಆಗುವುದರ ಜೊತೆಗೆ ಸಾಧನೆಯೇ ಹಾದಿ ಹಿಡಿಯಲು ಮುಂಚೂಣಿಯಲ್ಲಿ ಇರುತ್ತಾರೆ.
ಈ ಮಹಾನ್ ನಾಯಕನ ಸಾವು ದೇಶಕ್ಕೆ ತುಂಬಾಲಾಗದ ನಷ್ಟ ಉಂಟಾಗಿದೆ ಹೀಗಾಗಿ ಇಂತಹ ನಾಯಕ ಮತ್ತೆ ಮತ್ತೆ ಭೂಮಿಯ ಮೇಲೆ ಹುಟ್ಟಿ ಬರಬೇಕು ಎಂದು ಆಶಿಸೋಣ ಜೈ ಹಿಂದ್....!!!