FlipKart ಕಂಪನಿ- ಭಾರತೀಯ ಇ-ಕಾಮರ್ಸ್ ಉದ್ಯಮದಲ್ಲಿ 48% ಮಾರುಕಟ್ಟೆಯೇ ಪಾಲುದಾರ- "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್"

          

"ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್ 


ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್

* ಸ್ಥಾಪಕರು:ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್
 (IIT, ದೆಹಲಿಯ ಹಳೆಯ ವಿದ್ಯಾರ್ಥಿಗಳು).
*ಯಾವಾಗ?:ಅಕ್ಟೋಬರ್ 2007 ರಲ್ಲಿ ಬೆಂಗಳೂರಿನಲ್ಲಿ

ಪ್ರಶಸ್ತಿಗಳು ಮತ್ತು ಮನ್ನಣೆ

  • ಸಚಿನ್ ಬನ್ಸಾಲ್ ಅವರಿಗೆ ೨೦೧೨-೧೩ ನೇ ಸಾಲಿನ ವರ್ಷದ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
  • ಸೆಪ್ಟೆಂಬರ್ ೨೦೧೫ ರಲ್ಲಿ, ಇಬ್ಬರು ಸಂಸ್ಥಾಪಕರು ಫೋರ್ಬ್ಸ್ ಭಾರತದ ಅತ್ಯಂತ ಶ್ರೀಮಂತ ಭಾರತೀಯರೆಂದು, ತಲಾ ೧.೩ ಬಿಲಿಯನ್ ಯುಎಸ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ೮೬ ನೇ ಸ್ಥಾನಕ್ಕೆ ಪಾದಾರ್ಪಣೆ ಮಾಡಿದರು.
  • ಏಪ್ರಿಲ್ ೨೦೧೬ ರಲ್ಲಿ, ಸಚಿನ್ ಮತ್ತು ಬಿನ್ನಿ ಬನ್ಸಾಲ್ ಅವರನ್ನು ಟೈಮ್ ನಿಯತಕಾಲಿಕದ ವಿಶ್ವದ ೧೦೦ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ವಾರ್ಷಿಕ ಪಟ್ಟಿಯಲ್ಲಿ ಹೆಸರಿಸಲಾಯಿತು.
  • ವಾರ್ಷಿಕ ಫೇರ್ವರ್ಕ್ ಇಂಡಿಯಾ ರೇಟಿಂಗ್ಸ್ ೨೦೨೧ ರಲ್ಲಿ, ಫ್ಲಿಪ್‌ಕಾರ್ಟ್ ಅಗ್ರಸ್ಥಾನದಲ್ಲಿದೆ ಎಂದು ವರದಿಯಾಗಿದೆ - ಇದು ನ್ಯಾಯಯುತ ವೇತನ, ಷರತ್ತುಗಳು, ಒಪ್ಪಂದಗಳು, ನಿರ್ವಹಣೆ ಮತ್ತು ಪ್ರಾತಿನಿಧ್ಯದ ಆಧಾರದ ಮೇಲೆ ಸ್ಕೋರ್ ರಚಿಸುವ ೧೦-ಪಾಯಿಂಟ್ ವ್ಯವಸ್ಥೆಯಾಗಿದೆ. ಸೆಂಟರ್ ಫಾರ್ ಐಟಿ ಅಂಡ್ ಪಬ್ಲಿಕ್ ಪಾಲಿಸಿ (ಸಿಐಟಿಎಪಿ), ಇಂಟರ್ನ್ಯಾಷನಲ್ ಐಐಐಟಿ ಬೆಂಗಳೂರು ಮತ್ತು ಗ್ಲೋಬಲ್ ಫೇರ್ವರ್ಕ್ ನೆಟ್ವರ್ಕ್‍ನ ಒಕ್ಕೂಟವು ಒಟ್ಟು ೧೧ ಪ್ಲಾಟ್ಫಾರ್ಮ್ಗಳನ್ನು ಮೌಲ್ಯಮಾಪನ ಮಾಡಿತು. ಈ ವಿಧಾನವು ದೆಹಲಿ ಮತ್ತು ಬೆಂಗಳೂರಿನ ೧೯-೨೦ ಕಾರ್ಮಿಕರೊಂದಿಗೆ ಗುಣಾತ್ಮಕ ಸಂದರ್ಶನಗಳನ್ನು ಒಳಗೊಂಡಿತ್ತು.          
             ಭಾರತೀಯ ಇ-ಕಾಮರ್ಸ್ ಕಂಪನಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ ಮತ್ತು ಸಿಂಗಾಪುರದಲ್ಲಿ ಲಿಮಿಟೆಡ್ ಕಂಪನಿಯಾಗಿ ಸಂಘಟಿತವಾಗಿದೆ ಗ್ರಾಹಕ ಎಲೆಕ್ಟ್ರಾನಿಕ್ಸ್ , ಫ್ಯಾಷನ್ , ಮನೆಯ ಅಗತ್ಯ ವಸ್ತುಗಳು, ದಿನಸಿ ಮತ್ತು ಜೀವನಶೈಲಿ ಉತ್ಪನ್ನಗಳಂತಹ ಇತರ ಉತ್ಪನ್ನ ವಿಭಾಗಗಳಿಗೆ ವಿಸ್ತರಿಸುವ ಮೊದಲು ಕಂಪನಿಯು ಆರಂಭದಲ್ಲಿ ಆನ್‌ಲೈನ್ ಪುಸ್ತಕ ಮಾರಾಟದ ಮೇಲೆ ಕೇಂದ್ರೀಕರಿಸಿತು .

 ಫ್ಲಿಪ್ಕಾರ್ಟ್

         * ಅವಲೋಕನ: ಫ್ಲಿಪ್‌ಕಾರ್ಟ್ ಸ್ವದೇಶಿ ವೇದಿಕೆಯಾಗಿ ಅಪಾರ ಜನಪ್ರಿಯತೆಯನ್ನು ಹೊಂದಿದೆ, ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ.  2018 ರಲ್ಲಿ ವಾಲ್‌ಮಾರ್ಟ್‌ನಿಂದ ಸ್ವಾಧೀನಪಡಿಸಿಕೊಂಡ ಫ್ಲಿಪ್‌ಕಾರ್ಟ್ ಪ್ರಬಲ ಇ-ಕಾಮರ್ಸ್ ಪ್ಲೇಯರ್ ಆಗಿ ಬೆಳೆದಿದೆ, ಅದರ ಸ್ಪರ್ಧಾತ್ಮಕ ಬೆಲೆಗಳು ಮತ್ತು ವ್ಯಾಪಕವಾದ ಉತ್ಪನ್ನ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ.

ಅಂಕಿಅಂಶಗಳು:
         * ಮಾರುಕಟ್ಟೆ ಹಂಚಿಕೆ: ಫ್ಲಿಪ್‌ಕಾರ್ಟ್ ಭಾರತದ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಸುಮಾರು 35% ನಷ್ಟು ಭಾಗವನ್ನು ಹೊಂದಿದೆ, ನಿರ್ದಿಷ್ಟ ವಿಭಾಗಗಳಲ್ಲಿ ಅಮೆಜಾನ್ ಅನ್ನು ಸ್ವಲ್ಪಮಟ್ಟಿಗೆ ಮೀರಿಸುತ್ತದೆ.
         * ವಾರ್ಷಿಕ ಆದಾಯ: $10 ಶತಕೋಟಿ ಆದಾಯದೊಂದಿಗೆ ಫ್ಲಿಪ್‌ಕಾರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಪ್ರತಿಸ್ಪರ್ಧಿಯಾಗಿ ಉಳಿದಿದೆ.
         * ಜನಪ್ರಿಯ ಉತ್ಪನ್ನ ವರ್ಗಗಳು:
ಫ್ಯಾಷನ್ ಮತ್ತು ಉಡುಪು (ವಿಶೇಷವಾಗಿ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಲ್ಲಿ)
1.ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ಸ್
2.ಮನೆ ಮತ್ತು ಅಡಿಗೆ ವಸ್ತುಗಳು
3.ಫ್ಲಿಪ್‌ಕಾರ್ಟ್ ದಿನಸಿ ಮೂಲಕ ದಿನಸಿ

       * ಪಾವತಿ ಆಯ್ಕೆಗಳು:
1. ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು
2.UPI
3.ನೆಟ್ ಬ್ಯಾಂಕಿಂಗ್
4.Wallets (Flipkart ಹೊಂದಿರುವ PhonePe ಸೇರಿದಂತೆ)
5.ಕ್ಯಾಶ್ ಆನ್ ಡೆಲಿವರಿ.

ಇಂದಿನವರೆಗೆ,

              ಇ-ಕಾಮರ್ಸ್ ಫ್ಲಿಪ್‌ಕಾರ್ಟ್ ಸ್ಟೂಡೆಂಟ್ಸ್ ಕ್ಲಬ್ ಎಂಬ ಹೆಸರಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗೆ ಮೀಸಲಾಗಿರುವ ವಾಸ್ತವ ಅಂಗಡಿಯನ್ನು ಸಹ ಪ್ರಾರಂಭಿಸಿದೆ. ಪ್ರಮಾಣೀಕೃತ ಸುಸ್ಥಿರ ಉತ್ಪನ್ನಗಳನ್ನು ಒದಗಿಸುವ ಮೂಲಕ ಸುಸ್ಥಿರ ಜೀವನಶೈಲಿಯನ್ನು ಹೊಂದಲು ಬಯಸುವ ಗ್ರಾಹಕರಿಗಾಗಿ 'ಫ್ಲಿಪ್‌ಕಾರ್ಟ್ ಗ್ರೀನ್' ಉದ್ಯಮವನ್ನು ೨೦೨೩ ರಲ್ಲಿ ರಚಿಸಲಾಯಿತು.

                      ಬಿನ್ನಿ ಬನ್ಸಾಲ್‌ರವರು ಜನವರಿ ೨೮, ೨೦೨೪ ರಂದು ಕಾರ್ಯನಿರ್ವಾಹಕ ತಂಡಕ್ಕೆ ರಾಜೀನಾಮೆ ನೀಡಿದರು ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ, ಅವರು ತಮ್ಮ ಪಾಲನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡಿದ್ದಾರೆ. ಕಳೆದ ವರ್ಷ, ಬಿನ್ನಿಯವರು, ಎಕ್ಸೆಲ್ ಮತ್ತು ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್‌ನೊಂದಿಗೆ ತಮ್ಮ ಸಂಪೂರ್ಣ ಪಾಲನ್ನು ವಾಲ್ಮಾರ್ಟ್‌ಗೆ ಮಾರಾಟ ಮಾಡಿದರು. ಇದರ ಪರಿಣಾಮವಾಗಿ ಬಿನ್ನಿಯವರು ಸುಮಾರು ೧.೫ ಬಿಲಿಯನ್ ಡಾಲರ್ ಗಳಿಸಿದರು. ವಾಲ್ಮಾರ್ಟ್ ಮೇ ೨೦೧೮ ರಲ್ಲಿ, ಫ್ಲಿಪ್‌ಕಾರ್ಟ್‌ನಲ್ಲಿ ೭೭% ಪಾಲನ್ನು ೧೬ ಬಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿತ್ತು.

           ಮಾರ್ಚ್ ೨೦೨೪ ರಲ್ಲಿ, ಫ್ಲಿಪ್‌ಕಾರ್ಟ್ ತನ್ನ ಯುಪಿಐ ಸೇವೆಗಳಾದ ಫ್ಲಿಪ್‌ಕಾರ್ಟ್ ಯುಪಿಐ ಅನ್ನು ಆಕ್ಸಿಸ್ ಬ್ಯಾಂಕ್ ಸಹಭಾಗಿತ್ವದಲ್ಲಿ ಪ್ರಾರಂಭಿಸಿತು. ಮೇ ೨೦೨೪ ರಲ್ಲಿ, ಗೂಗಲ್ ಕಂಪನಿಯಲ್ಲಿ ಯುಎಸ್ $ ೩೫೦ ಮಿಲಿಯನ್ ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ.

ವ್ಯವಹಾರ ರಚನೆ

ಫ್ಲಿಪ್‌ಕಾರ್ಟ್‌‌ ಗುಂಪಿನ ನಿಯಂತ್ರಣ ಪಾಲನ್ನು ಹೊಂದಿರುವ ಗಮನಾರ್ಹ ಕಂಪನಿಗಳು:

ಹೆಸರುಪ್ರಕಾರಅಂದಿನಿಂದಪ್ರಸ್ತುತ ಪಾಲು
ಮಿಂತ್ರಾಫ್ಯಾಷನ್೨೦೧೪೧೦೦%
ಇ-ಕಾರ್ಟ್ಲಾಜಿಸ್ಟಿಕ್ಸ್೨೦೧೫-


ವಾಲ್ಮಾರ್ಟ್ಬಿ೨ಬಿ ಇ-ಕಾಮರ್ಸ್೨೦೨೦೧೦೦%
ಕ್ಲಿಯರ್‌ಟ್ರಿಪ್ಟ್ರಾವೆಲ್ ಬುಕಿಂಗ್೨೦೨೪೮೦% 
ಫ್ಲಿಪ್‌ಕಾರ್ಟ್ ಹೆಲ್ತ್+ಆರೋಗ್ಯ ರಕ್ಷಣೆ೨೦೨೧೭೫.೧%

              ಫ್ಲಿಪ್‌ಕಾರ್ಟ್‌‌ ೨೨ ಸ್ವಾಧೀನಗಳು ಮತ್ತು ೨೭ ಹೂಡಿಕೆಗಳನ್ನು ಹೊಂದಿದ್ದು, ಸ್ವಾಧೀನಗಳಿಗಾಗಿ ೪೧೫ ಮಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿದೆ. ಫ್ಲಿಪ್‌ಕಾರ್ಟ್‌‌ ಇ-ಕಾಮರ್ಸ್, ಗ್ರಾಹಕ ಎಲೆಕ್ಟ್ರಾನಿಕ್ಸ್, ಸ್ಥಳೀಯ ಸೇವೆಗಳು ಮತ್ತು ಹೆಚ್ಚಿನವುಗಳಂತಹ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ. ೨೦೨೨ ರಲ್ಲಿ, ಇದು ಹೆಚ್ಚು ಮಾರಾಟಗಾರ ಸ್ನೇಹಿಯಾಗುವ ಪ್ರಯತ್ನದಲ್ಲಿ ಮಾರಾಟಗಾರರಿಗೆ ತನ್ನ ನೀತಿಗಳನ್ನು ಪರಿಷ್ಕರಿಸಿತು. ಇದು ದರ ಕಾರ್ಡ್ ಅನ್ನು ಸರಳೀಕರಿಸುವುದು ಮತ್ತು ಹಿಂತಿರುಗಿದ ವೆಚ್ಚಗಳಿಗೆ ಶುಲ್ಕವನ್ನು ಕಡಿಮೆ ಮಾಡುವುದು ಸೇರಿವೆ. ೨೦೨೨ ರಲ್ಲಿ, ಫ್ಲಿಪ್‌ಕಾರ್ಟ್‌‌ ೧.೧ ಮಿಲಿಯನ್ ಮಾರಾಟಗಾರರಿಗೆ ಆತಿಥ್ಯ ವಹಿಸಿದೆ ಎಂದು ವರದಿಯಾಗಿದೆ.

ಟೀಕೆಗಳು

೨೦೧೪ ರ ಸೆಪ್ಟೆಂಬರ್ ೧೩ ರಂದು ಫ್ಲಿಪ್‌ಕಾರ್ಟ್ ಡೆಲಿವರಿ ಮ್ಯಾನ್ ಹೈದರಾಬಾದ್‌ನಲ್ಲಿ ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಘಟನೆಗಾಗಿ ಮನೆಕೆಲಸದಾಕೆಯ ಉದ್ಯೋಗದಾತರು ಫ್ಲಿಪ್‌ಕಾರ್ಟ್ ವಿರುದ್ಧ ಮೊಕದ್ದಮೆ ಹೂಡಿದರು. ಆಫ್‌ಲೈನ್ ವಿತರಣಾ ಸೇವೆಗಳನ್ನು ಸುರಕ್ಷಿತವಾಗಿಸಲು ನಿಯಮಗಳ ಅಗತ್ಯವನ್ನು ಉಲ್ಲೇಖಿಸಿದರು.

೨೦೧೪ ರಲ್ಲಿ, ಫ್ಯೂಚರ್ ಗ್ರೂಪ್ (ಆ ಸಮಯದಲ್ಲಿ ಚಿಲ್ಲರೆ ಸರಪಳಿ ಬಿಗ್ ಬಜಾರ್ನ ಮಾಲೀಕ) ನಂತಹ ಪ್ರತಿಸ್ಪರ್ಧಿಗಳು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ದೂರುಗಳನ್ನು ಸಲ್ಲಿಸಿದರು. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ರಿಯಾಯಿತಿಗಳು ಇತರ ಚಿಲ್ಲರೆ ವ್ಯಾಪಾರಿಗಳಿಗೆ ಲೂಟಿಕೋರ ರೀತಿಯಲ್ಲಿ ಬೆಲೆಗಳನ್ನು ಕಡಿಮೆ ಮಾಡುತ್ತದೆ ಎಂದು ಆರೋಪಿಸಿದರು. ದೂರುಗಳನ್ನು ಪರಿಶೀಲಿಸುವುದಾಗಿ ಸಚಿವಾಲಯ ಹೇಳಿದೆ.

ಏಪ್ರಿಲ್ ೨೦೧೫ ರಲ್ಲಿ, ಫ್ಲಿಪ್‌ಕಾರ್ಟ್ ಏರ್ಟೆಲ್ ಝೀರೋ ಕಾರ್ಯಕ್ರಮದಲ್ಲಿ ಉಡಾವಣಾ ಪಾಲುದಾರರಾಗಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿತು. ಝೀರೋ-ರೇಟಿಂಗ್ ಯೋಜನೆಯು ನೆಟ್ ನ್ಯೂಟ್ರಾಲಿಟಿಯ ತತ್ವಗಳನ್ನು ಉಲ್ಲಂಘಿಸಿದೆ ಎಂದು ವಿಮರ್ಶಕರು ಆರೋಪಿಸಿದ್ದಾರೆ. ನಂತರ ಫ್ಲಿಪ್‌ಕಾರ್ಟ್ ಈ ಯೋಜನೆಯಿಂದ ಹಿಂದೆ ಸರಿದಿತ್ತು.

                              ಭಾರತದ ಪ್ರಮುಖ ಇ-ಕಾಮರ್ಸ್‌ ದಿಗ್ಗಜ ಕಂಪನಿ - ಪ್ಲೀಫ್‌ ಕಾರ್ಟ್‌ ನ ಸಿಇಓ- ಕಲ್ಯಾಣ್‌ ಕೃಷ್ಣಮೂರ್ತಿ ರವರು ಆಗಿದ್ದಾರೆ, ಈ ಕಂಪನಿಯ - ವಾಲ್ಮಾರ್ಟ್ ಕಂಪನಿಯ‌ ಅಧೀನ ಕೆಲಸ ಮಾಡುತ್ತದೆ. ಈ ಕಂಪನಿಯು ಹಲವಾರು ಜನರಿಗೆ ದಿನನಿತ್ಯದ ಬದುಕಿಗೆ ಉದ್ಯೋಗ ಕಟ್ಟಿಕೋಟ್ಟಿದೆ. ಹೀಗಾಗಿ ಈ ಕಂಪನಿಯು ತುಂಬಾ ಬೆಳೆದು ನಿಂತಿದೆ.

 "ನಿಮ್ಮ ಯಶಸ್ಸನ್ನು ನಾವು ಬೆಂಬಲಿಸುತ್ತೇವೆ"




"TATA Group ಕಂಪನಿ " ವಿಶ್ವದ ಬೃಹತ ಕಂಪನಿ -ಬಾಂಬೆ ಕಂಪನಿ ,- "ರತನ್‌ ಟಾಟ್ (RATANA TATA)"‌ - "DAILY INFORMATION DAIRY"

            "ಟಾಟಾ ಗ್ರೂಪ್‌ ಆಫ್‌ ಕಂಪನಿ"-

            "ಉದ್ಯಮ ಜಗತ್ತೀನ ಕೇಂದ್ರಬಿಂದು ಈ ಕಂಪನಿ, ಆ ಜಗತ್ತೀನ ಒಡೆಯೆ- ರತನ್‌ ಟಾಟಾ ಜೀ".

 ಕಂಪನಿಯ ಸ್ಥಾಪನೆ : ೧೮೬೮.

ಸ್ಥಾಪಕರು: ಜೆಮ್ಸೆಟ್ಜಿ ಟಾಟಾ

ಪ್ರಧಾನ ಕಛೇರಿ: ಬಾಂಬೆ ಹೌಸ್‌, ಮುಂಬೈ -ಮಹಾರಾಷ್ಟ್ರ-ಭಾರತ


ಆದಾಯ: ಯುಎಸ್‌ ಡಾಲರ್$‌೪೦೩ ಶತಕೋಟಿ ಸಂಯೋಜಿತ  ಮಾರುಕಟ್ಟೆ ಬಂಡವಾಳದೊಂದೊಗೆ ಕೆಲಸ ಮಾಡುತ್ತದೆ.

ಅಂಗಸಂಸ್ಥೆಗಳು: ೩೫

ಪೋಷಕ ಸಂಸ್ಥೆ: "ಟಾಟಾ ಸನ್ಸ್"‌

ವೆಬ್ ಸೈಟ್:‌ www.tata.com (http://www.tata.com/)

                                ಈ ಟಾಟಾ ಕಂಪನಿಯು ಹಲವಾರು ಕ್ಷೇತ್ರಗಳಲ್ಲಿ ಹುದ್ದೆಗಳನ್ನು ಸೃಷ್ಠಿ ಮಾಡಿರುವು ಬೃಹತ ಕಂಪನಿಯಾಗಿದೆ. ಈ ಕಂಪನಿಯನ್ನು ದೊಡ್ಡ ಮಟ್ಟಕ್ಕೆ ಕೊಂಡಯ್ಯದಿರುವ ಕೀರ್ತಿ ಈ ಕೆಳಗಿನ ಅಧ್ಯಕ್ಷರಿಗೆ ಸಲ್ಲುತ್ತದೆ

೦೧.ಜೆಮ್ಸೆಶೆಡ್‌ ಜೀ ಟಾಟಾ -೧೮೬೮-೧೯೦೪.

ಜನನ:೧೮೩೯

* ಇಂಡಿಯನ್‌ ಇನ್ಸಟ್ಯೂಟ್‌ ಆಫ್‌ ಸೈನ್ಸ್‌ ಕೇಂದ್ರ ಕಛೇರಿ : ಬೆಂಗಳೂರನಲ್ಲಿ ಸ್ಥಾಪಿಸಿದ್ದರು.



* ದಿ ತಾಜ್‌ ಮಹಲ್‌ ಹೋಟೆಲ್‌ : ಮುಂಬೈ ನಲ್ಲಿ ಸ್ಥಾಪಿಸಿದ್ದರು.

                                                                        ೧೯೦೩ ರಲ್ಲಿ:ಸ್ಥಾಪನೆ

* ೧೮೭೪ ರಲ್ಲಿ ಹತ್ತಿಗಿರಣಿ : ನಾಗಪುರದಲ್ಲಿ ಸ್ಥಾಪಿಸಿದ್ದರು.
* ಜಲವಿದ್ಯುತ್‌ ಸ್ಥಾವರವನ್ನು ಸ್ಥಾಪಿಸಿದ್ದರು.

೦೨. ಶ್ರೀ ಧೂರಬ ಜೀ ಟಾಟಾ -೧೯೦೪-೧೯೩೨.
* ೧೯೦೭ ರಲ್ಲಿ-ಟಾಟಾ  ಕಬ್ಬಿಣ್ಣ ಮತ್ತು ಉಕ್ಕು ಕಂಪನಿ ಸ್ಥಾಪನೆ.(ಟೆಸ್ಕೂ).

೦೩. ನವರೂಜೀ ಸಕಲತವಾಲಾ ಟಾಟಾ -೧೯೩೨-೧೯೩೮.
೦೪. ಜೆ ಆರ್‌ ಡಿ ಟಾಟಾ -೧೯೩೮-೧೯೯೧.

* ೧೯೩೨ ರಲ್ಲಿ-ಟಾಟಾ ಏರ್‌ ಸರ್ವಿಸ್‌ ಪ್ರಾಂಬಿಸಿದ್ದರು.
*೧೯೪೫ ರಲ್ಲಿ- ಟಾಟಾ ಮೋಟರ್ಸ್ಸ್‌ ಸ್ಥಾಪಿಸಿದ್ದರು.
೧೯೬೮ ರಲ್ಲಿ- ಟಾಟಾ ಕನ್ಸ್ ಲೊಟೆಡ್‌ ಸರ್ವಿಸ್‌ ಪ್ರಾರಂಭಿಸಿದ್ದರು. 
೦೫. ರತನ್ ಜೀ ಟಾಟಾ -೧೯೯೧-೧೯೧೨.

ಜನನ:28 ಡಿಸೆಂಬರ್ 1937.
ತಂದೆ: ನೇವಲ್ ಟಾಟಾ.
ತಾಯಿ: ಸೋನಿ ಕಮಿಷರಿಯಟ್.

ಪ್ರಶಸ್ತಿಗಳು:
01. 2000 ರಲ್ಲಿ : ಪದ್ಮಭೂಷಣ ಪ್ರಶಸ್ತಿ.
02. 2006 ರಲ್ಲಿ: ಮಹಾರಾಷ್ಟ್ರ ಭೂಷಣ ಪ್ರಶಸ್ತಿ.
03. 2008 ರಲ್ಲಿ: ಪದ್ಮ ವಿಭೂಷಣ ಪ್ರಶಸ್ತಿ.
04. 2014 ರಲ್ಲಿ: ನೈಟ್ ಗ್ರ್ಯಾಂಡ್ ಕ್ಲಾಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಗೌರವ.
05. 2021 ರಲ್ಲಿ ಅಸ್ಸಾಂ ಬೈಭವ್ ಗೌರವ.
06. 2023 ರಲ್ಲಿ :ಆರ್ಡರ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿ.

ಸೂಚನೆ

$ ಆರಂಭದಲ್ಲಿ, ಟಾಟಾ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರಿಂದ ತೀವ್ರ ಪ್ರತಿರೋಧವನ್ನು ಎದುರಿಸಿತು, ಅವರು ಹಿರಿಯ ಟಾಟಾ ಅವರ ಅಧಿಕಾರಾವಧಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಯಾಚರಣೆಯ ಸ್ವಾತಂತ್ರ್ಯವನ್ನು ಹೊಂದಿದ್ದರು. 

$  ಅಧಿಕಾರವನ್ನು ಕ್ರೋಢೀಕರಿಸಲು ವಿನ್ಯಾಸಗೊಳಿಸಿದ ಹಲವಾರು ನೀತಿಗಳನ್ನು ಟಾಟಾ ಜಾರಿಗೆ ತಂದಿತು, ಇದರಲ್ಲಿ ನಿವೃತ್ತಿ ವಯಸ್ಸಿನ ಅನುಷ್ಠಾನ, ಅಂಗಸಂಸ್ಥೆಗಳು ನೇರವಾಗಿ ಗುಂಪು ಕಚೇರಿಗೆ ವರದಿ ಮಾಡುತ್ತವೆ.

$ ಟಾಟಾ ಗುಂಪಿನ ಬ್ರ್ಯಾಂಡ್ ಅನ್ನು ನಿರ್ಮಿಸಲು ಅಂಗಸಂಸ್ಥೆಗಳು ತಮ್ಮ ಲಾಭವನ್ನು ನೀಡಬೇಕೆಂದು ಒತ್ತಾಯಿಸಿದರು. 

$ ಟಾಟಾ ನಾವೀನ್ಯತೆಗೆ ಆದ್ಯತೆ ನೀಡಿತು ಮತ್ತು ಕಿರಿಯ ಪ್ರತಿಭೆಗಳಿಗೆ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಟ್ಟಿತು. 

$ ಅವರ ನಾಯಕತ್ವದಲ್ಲಿ, ಅಂಗಸಂಸ್ಥೆಗಳ ನಡುವಿನ ಅತಿಕ್ರಮಿಸುವ ಕಾರ್ಯಾಚರಣೆಗಳನ್ನು ಕಂಪನಿ-ವ್ಯಾಪಕ ಕಾರ್ಯಾಚರಣೆಗಳಾಗಿ ಸುವ್ಯವಸ್ಥಿತಗೊಳಿಸಲಾಯಿತು.

$ ಜಾಗತೀಕರಣವನ್ನು ತೆಗೆದುಕೊಳ್ಳಲು ಗುಂಪು ಸಂಬಂಧವಿಲ್ಲದ ವ್ಯವಹಾರಗಳಿಂದ ನಿರ್ಗಮಿಸಿತ

$ 21 ವರ್ಷಗಳಲ್ಲಿ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದರು.ಆದಾಯವು 40 ಪಟ್ಟು ಹೆಚ್ಚಾಗಿದೆ ಮತ್ತು ಲಾಭವು 50 ಪಟ್ಟು ಹೆಚ್ಚಾಗಿದೆ. ಅವರು ಕಂಪನಿಯನ್ನು ವಹಿಸಿಕೊಂಡಾಗ, ಮಾರಾಟವು ಅಗಾಧವಾಗಿ ಸರಕುಗಳ ಮಾರಾಟವನ್ನು ಒಳಗೊಂಡಿತ್ತು, ಆದರೆ ಅವರ ಅಧಿಕಾರಾವಧಿಯ ಕೊನೆಯಲ್ಲಿ, ಹೆಚ್ಚಿನ ಮಾರಾಟವು ಬ್ರ್ಯಾಂಡ್‌ಗಳಿಂದ ಬಂದಿತು.

                   ಈ ಕಂಪನಿ ಮಾಲೀಕರು ಆದ ರತನ್ ಟಾಟಾ ಜೀ ರವರು ಮಹಾನ್ ಮುತ್ಸದಿ, ಇವರು ಲೋಕೂಪಕಾರಿ ವ್ಯಕ್ತಿತ್ವ, ಯಾವುದೇ ಸಂದರ್ಭದಲ್ಲೂ ದೇಶ ಸೇವೆ ಈಶ ಸೇವೆ ಎಂಬಂತೆ  ತಮ್ಮ ಜೀವನವನ್ನು ಸಾರ್ಥಕ ಭಾವದಿಂದ ಬದುಕಿ ಬಾಳಿದವರು.

         ಇವರ ನಿಸ್ವಾರ್ಥ ಸೇವೆಯಿಂದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಸಲ್ಲುತ್ತದೆ ಆದರೆ ಇವರು ದೇಶಕ್ಕೆ ನೀಡಿದ ಕೊಡುಗೆ ಅಪಾರ, ದೇಶದ ಆರ್ಥಿಕ ಸ್ಥಿತಿ ಎದುರಾಗಿ ಬಂದರೆ  ಇಡೀ ನನ್ನ ಆಸ್ತಿ ದೇಶ ಸೇವೆಗೆ ಸರ್ಮಪಿಸುತ್ತೇನೆ ಎಂದು ಹೇಳಿದವರು. 

                 ಇವರು ಲೋಕೂಪಕಾರಿ ಕೆಲಸಗಳನ್ನು ಮಾಡಿರುವುದರಿಂದಲೇ ಬಡವರ ಪಾಲಿನ  ನಾಯಕರು, ಹಾಗೆ ಸಾಮಾನ್ಯ ಮನುಷ್ಯನ ಕೂಡ ಕಾರ್ ನಲ್ಲಿ ಓಡಾಡಬೇಕು ಎಂಬ ಯೋಚನೆಯಿಂದ ನ್ಯಾನೋ ಕಾರ್ ನ್ನು ಪರಿಚಯಿಸುವ ಮೂಲಕ ಕೇವಲ 1 ಲಕ್ಷಕ್ಕೆ  ದೊರೆಯುವು ಹಾಗೆ ಮಾಡಿದ್ದಾರೆ. 


ರತನ್ ಜೀ ರವರ 4 ಸಿದ್ದಾಂತಗಳು:

1. ಹಳೆ ಬಟ್ಟೆ: ಹಳೇ ಬಟ್ಟೆಗಳನ್ನು ತೊಡುವುದರಿಂದ ನಮಗೆ ಯಾವುದೇ ಸಂಕುಚಿತ ಮನೋಭಾವ ಬರಕೂಡದು. ಯಾಕೆಂದರೆ ಅದರಿಂದ ನಮ್ಮ ವ್ಯಕ್ತಿತ್ವ ಹಾಳಾಗುವುದಿಲ್ಲ, ಅದು ಜೀವನದ ಒಂದು ಭಾಗ ‌.

2. ಬಡವ ಸ್ನೇಹಿತ: ನನ್ನ ಸ್ನೇಹಿತ ಬಡವ ಎಂದು ಅದರಿಂದ ನೀವು ಸಂಕೋಚಕ್ಕೆ ಒಳಗಾಗಬೇಡಿ, ಹೆಮ್ಮೆಯಿಂದ ಹೇಳಿಕೊಳ್ಳಿ ಇವನು ನನ್ನ ಆತ್ಮೀಯ ಗೆಳೆಯ ಎಂದು ಪರಿಚಯಿಸುವ ಗುಣ ಬರಲಿ.

3. ವಯಸ್ಸಾದ ತಂದೆ-ತಾಯಿ: ನಿಮಗೆ ಇವರ ಬಗ್ಗೆ ತಾತ್ಸಾರ ಬೇಡ, ಇವರು ಇಲ್ಲ ಅಂದ್ರೆ ನೀವು ಈ ಪ್ರಪಂಚಕ್ಕೆ ಪರಿಚಯಿಸುವರು ಯಾರು? ಇವರಿಂದಲೇ ನೀವು ಎಂಬುದನ್ನು ಮರೆಯಬೇಡಿ.

4. ದಂಪತಿ: ಜೀವನದ ಕಷ್ಟ-ಸುಖದಲ್ಲಿ ಅರ್ಧಭಾಗವಾಗಿ ಬದುಕುವಳು ಹೆಂಡತಿ, ಅವಳ ಮನಸ್ಥಿತಿಯನ್ನು ನೋಡಿ ಬದುಕ ಬೇಕು ಅದೇ ಜೀವನ.

                  ಈ ಎಲ್ಲಾ ಸಿದ್ಧಾಂತಗಳು ರತನ್ ಜೀ ರವರು ಹೇಳಿದಂತೆ ಅಳವಡಿಸಿಕೊಂಡರೆ, ಒಬ್ಬ ಸಾಮಾನ್ಯ ಮನುಷ್ಯ ಶ್ರೀಮಂತ  ಆಗುವುದರ ಜೊತೆಗೆ ಸಾಧನೆಯೇ ಹಾದಿ ಹಿಡಿಯಲು ಮುಂಚೂಣಿಯಲ್ಲಿ ಇರುತ್ತಾರೆ. 

        ಈ ಮಹಾನ್ ನಾಯಕನ ಸಾವು ದೇಶಕ್ಕೆ ತುಂಬಾಲಾಗದ ನಷ್ಟ ಉಂಟಾಗಿದೆ ಹೀಗಾಗಿ ಇಂತಹ ನಾಯಕ ಮತ್ತೆ ಮತ್ತೆ ಭೂಮಿಯ ಮೇಲೆ ಹುಟ್ಟಿ ಬರಬೇಕು ಎಂದು ಆಶಿಸೋಣ ಜೈ ಹಿಂದ್....!!!



"Infosys Limited" ಬೆಂಗಳೂರಿನ ಬೃಹತ ಕಂಪನಿ - "ಇನ್ಪೊಸ್ಸಿಸ್" - DAILY INFORMATION DAIRY

                      "ಭಾರತೀಯ  ಮಾಹಿತಿ ತಂತ್ರಜ್ಞಾನ ಕಂಪನಿ"

"ಬದುಕುಗಳು ಕಟೀಕೋಳ್ಳುವು ಪ್ಯಾಕ್ಟಾರಿ, ಉದ್ಯೋಗಗಳು ಸೃಷ್ಟಿ ಮಾಡುವು ಸ್ವರ್ಗ ಹಾಗೂ ಸುವ್ಯವಸ್ಥೆಯ ಸಾಗರವಾಗಿದೆ", 

ಕಂಪನಿಯ ಸ್ಥಾಪನೆಯು: 1981 ಜುಲೈ 02 -ಪುಣೆ (ಮಹಾರಾಷ್ಟ್ರ).

ಸಂಸ್ಥಾಪಕರು : ಎನ್‌ ಆರ್‌ ನಾರಾಯಣ ಮೂರ್ತಿ,

  • ನಂದನ್‌ ನಿಲೇಕಣಿ, ಕ್ರಿಸ್‌ ಗೋಪಾಲಕೃಷ್ಣನ್‌, ಎಸ್‌ ಡಿ ಶಿಬುಲಾಲ್‌, ಕೆ. ದೀನೆಶ್‌, ಎನ್‌ ಎಸ್‌ ರಾಘವನ್‌, ಅಶೋಕ ಅರೋರಾ.

ಪ್ರಧಾನ ಕಛೇರಿ: ಬೆಂಗಳೂರು (ಕರ್ನಾಟಕ) 

ಪ್ರಸ್ತುತ ಆದಾಯ : 2024 ರ ಪ್ರಕಾರ - 158,381 ಕೋಟಿ ರೂಪಾಯಿ .

  •    US$ 19 ಬಿಲಿಯನ್.                        

ವೆಬ್ ಸೈಟ್: infosys.com 

                                                


 

                                     ವಿಶ್ವದ್ಯಾಂತ ಈ ಕಂಪನಿಯ ಶಾಖೆಗಳು ಇವೆ, ಈ ಕಂಪನಿಯು ಇಂಜಿನಿಯರ್ ಗಳ ಪಾಲಿಗೆ ಅನ್ನ ನೀಡುವ ಅನ್ನದಾತವಾಗಿದೆ. ಹೀಗಾಗಿ ಈ ಕಂಪನಿಯಲ್ಲಿ ಸೂಮಾರು 3,17,240 ಉದ್ಯೋಗಿಗಳು 2024 ರ ಪ್ರಕಾರ ಇದ್ದಾರೆ. ಮೊದಲು ಈ ಕಂಪನಿಯಲ್ಲಿ ಕೇವಲ 07 ಉದ್ಯೋಗಿಗಳಿಂದ ಪ್ರಾರಂಭವಾಗಿ ಈಗ ಈ ಕಂಪನಿಯು ಶಕ್ತಿ ಪ್ರದರ್ಶನ ಮಾಡಿ ತೋರಿಸಿದೆ. ಕೇವಲ 250 $ ಆರಂಭಿಕ ಬಂಡವಾಳದಿಂದ ಪ್ರಾರಂಭವಾದ ಕಂಪನಿ ಇಂದು 158,381 ಕೋಟಿಗೆ ತಲುಪಿದೆ. ಈ ಕಂಪನಿಯು ಮೊದಲು ಹಲವಾರು ಹೆಸರುಗಳಿಂದ ಗುರುತಿಸಿಕೊಂಡ ಕಂಪನಿಯಾಗಿದೆ.
  1. ಇನ್ಪೋಸಿಸ್‌ ಕನ್ಸಲ್ಟೆಂಟ್‌ ಕಂಪನಿ.
  2. ಇನ್ಪೋಸಿಸ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್.
  3. ಇನ್ಪೋಸಿಸ್‌  ಟೇಕ್ನಾ‌ಲಜೀಸ್ ಲಿಮಿಟೆಡ್.
  4. ಇನ್ಪೋಸಿಸ್.
                                        ಮೊದಲು ಈ ಕಂಪನಿಯ ಷೇರು IPO ಬೆಲೆ 95 ರೂಪಾಯಿ ಆಗಿತ್ತು, 1993 ರಲ್ಲಿ 145 ರೂಪಾಯಿ 1999 ರಷ್ಟರಲ್ಲಿಯೆ 8100 ರೂಪಾಯಿ ಆಗಿ ಬೆಳೆದು ನಿಂತಿತ್ತು. ಆ ಕಂಪನಿಯ ಷೇರು ಇಂದಿಗೂ ತುಂಬಾ ಬೆಲೆಯಲ್ಲಿ ಮಾರಾಟವಾಗುತ್ತೀದೆ. ಈ ಕಂಪನಿಯ ಷೇರು ಖರೀದಿಸಲು ವೀದೆಶದ ಶ್ರೀಮಂತ ವ್ಯಕ್ತಿಗಳು ಹಾಗೂ ಸಾಫ್ಟ್‌ವೇರ್ ಕಂಪನಿಗಳು  ಖರೀದಿಸಲು  ಮುಂದಗಿರುತ್ತಾರೆ, ಈ ಕಂಪನಿಯ ವಿಶೇಷತೆ ಹೊಸ ಸಂಶೋಧನೆಗಳಿಗೆ ಹೆಸರುವಾಸಿಯಾಗಿದೆ. ಹಲವಾರು ಕಂಪನಿಗಳಿಗೆ ಹೋಲಿಸಿದರೆ ಈ ಕಂಪನಿಯು ತುಂಬಾ ಕ್ರೀಯಶೀಲತೆಯಿಂದ ಕೊಡಿರುವು ಕಂಪನಿಯಾಗಿದೆ.
                                    ಈ ಕಂಪನಿ ಸಹ-ಸಂಸ್ಥಾಪಕರು ಹಗಲು-ಇರುಳು ಎನ್ನದೆ ಸೇವೆ ಸಲ್ಲಿಸಿದ್ದಾರೆ, ಅವರ ಪರಿಶ್ರಮಕ್ಕೆ ತಕ್ಕ ಗೌರವವು ನೀಡಿದೆ ಹಾಗೆ ಈ ಕಂಪನಿಯ ಮುಖ್ಯಸ್ಥರಾದ ಎನ್‌ ಆರ್‌ ನಾರಾಯಣಮೂರ್ತಿ ಸರ್‌ ನಮ್ಮ ರಾಜ್ಯದವರು ಎಂಬುವುದು ತುಂಬಾ ಸಂತೋಷವಾಗುತ್ತದೆ ಯಾಕೆ ಈ ಮಾತು ಹೇಳಲು ಬಯಸುತ್ತೇನೆ ಅಂದರೆ ಅವರ ಪರಿಶ್ರಮದಿಂದ ಕಟ್ಟಿರುವು ಬೃಹತ ಕಂಪನಿ ಇದು ಒಬ್ಬ ಸಾಮಾನ್ಯ ಮನುಷ್ಯ ಇಷ್ಟೋಂದು ದೊಡ್ಡ ಪ್ರಮಾಣದಲ್ಲಿ ಕಟ್ಟಲು ಸಾದ್ಯಾನಾ ? ಎಂಬ ಪ್ರಶ್ನೆ ಮೂಡುತ್ತದೆ. ಇವರ ಪರಿಶ್ರಮ ನೋಡಿದಾಗ ಎಂಥ ಸೋಮಾರಿಗಳಲ್ಲಿಯು ಇವರು ಮಾಡಿರುವ ಸಾಧನೆ ʼಭೇಷ್‌ ʼ ಎಂದು ಹುಬ್ಬು ಏರಿಸುವಂತೆ  ಮಾಡುತ್ತದೆ. 
                                 ಈ ಕಂಪನಿಯು ಕೇವಲ ಅವರ ಶ್ರಮದಿಂದ ಕಟ್ಟಿರುವ ಕಂಪನಿ ಅಲ್ಲ ಅದರ ಜೊತೆಗೆ ಪ್ರೀತಿಯಿಂದ ನಿರ್ಮಾಣವಾದ ಬೃಹತ ಸೌದವಾಗಿದೆ, ಯಾಕೆ ಈ ಮಾತು ಹೇಳಲು ಬಯಸುತ್ತೇನೆ ಅಂದರೆ ಎನ್‌ ಆರ್‌ ನಾರಾಯಣಮೂರ್ತಿ ರವರ ಧರ್ಮಪತ್ನಿಯಾದ ಸುಧಾಮೂರ್ತಿ ಅಮ್ಮ ನಮ್ಮ ರಾಜ್ಯದ ಹೇಮ್ಮೆ, ಈಗ ಇವರು ಪ್ರಸ್ತುತ ಕೇಂದ್ರದ ರಾಜ್ಯಸಭಾ ಸದಸ್ಯರು, ಇವರ ಸಹಾಯದಿಂದಲೇ ಈ ಕಂಪನಿಯು ಈ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ಈ ಮಹಾತಾಯಿ ಸಾಮಾಜಿಕವಾಗಿ ಹಲವಾರು ಸಾಮಾಜಿಕ ಕೆಲಸಗಳಿಂದ ಬಡವರಿಗೆ ಹಲವಾರು ಯೋಜನೆಗಳ ಮೂಲಕ ಬಡವರ ಪಾಲಿಗೆ ದೇವತೆಯಾಗಿದ್ದಾರೆ. ಹೀಗಾಗಿ ಜನಪರ ಕೆಲಸಗಳಿಗೆ ಹೆಸರಾಗಿದ್ದಾರೆ.
                                    

         ಇವರು ರಾಜ್ಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ, ಈ ದಂಪತಿಗಳು ತುಂಬಾ ಸರಳತೆಯಿಂದ ಜೀವನ ನಿರ್ವಹಿಸುತ್ತೀದ್ದಾರೆ, ಯಾವುದೇ ಸಂದರ್ಭದಲ್ಲಿ ಅವರು ದೃಡ ನಿರ್ಧಾರದಿಂದ ಸರಿಯಾಗಿ ಪರಿಹಾರವನ್ನು ಹುಡುಕುವರು ಹೀಗಾಗಿ ಈ ದಂಪತಿಗಳು ವಿಶ್ವಕ್ಕೆ ಮಾದರಿಯಾಗಿ ಕರ್ತವ್ಯವೇ ದೇವರ ಎಂಬಂತೆ ನಿರ್ವಹಿಸುತ್ತೀದ್ದಾರೆ. ಇವರನ್ನುಗುರುತಿಸಿ ವಿಶ್ವದಲ್ಲಿ ಹಲವಾರು ಪ್ರಶಸ್ತಿಗಳು ಅವರಿಗೆ ದೊರಕಿರುತ್ತವೆ.

"ಕಷ್ಟಪಟ್ಟು ದುಡಿ ಕೈಲಾದಷ್ಟು ಅನುಭವಿಸು" - (ಭಾರತದ ನೀತಿ ಮಾತುಗಳು).

 "ಶ್ರಮಕ್ಕೆ ತಕ್ಕಂತೆ ಪ್ರತಿಫಲ "


                            ಸುಮಾರು ಮೂರು ಸಾವಿರ ವರ್ಷಗಳ ಹಿಂದೆ, ಕನ್ಫ್ಯೂಶಿಯಸ್ ಬದುಕಿದ್ದಾಗ, ಒಂದು ಸಲ ಅವರು, ಒಂದು ಹಳ್ಳಿಗೆ ಹೋಗಿದ್ದರು.  ಆಗ ಅಲ್ಲಿ ,ತೋಟದಲ್ಲಿ   ಸ್ವಲ್ಪ ವಯಸ್ಸಾದ ವೃದ್ಧರೊಬ್ಬರು ತನ್ನ ಮಗನೊಂದಿಗೆ ಬಾವಿಯಿಂದ ನೀರನ್ನು ಸೇದುತ್ತಿದ್ದರು .ಅವರಿಗೆ ವಯಸ್ಸಾದುದರಿಂದ. ಅದು  ಅವರಿಗೆ ಸ್ವಲ್ಪ  ಕಷ್ಟವೆನಿಸುತ್ತಿತ್ತು .

                            ಆ ಕಾಲದಲ್ಲಿ ನೀರು ಸೇದಲಿಕ್ಕಾಗಿ, ಕುದುರೆ, ಮತ್ತು ಎತ್ತುಗಳನ್ನು ಉಪಯೋಗಿಸುತ್ತಿರುವುದು ಈ ವೃದ್ಧರಿಗೆ  ಗೊತ್ತಿಲ್ಲವೆಂದುಕೊಂಡು , ಕನ್ಫ್ಯೂಶಿಯಸ್, ಅವರನ್ನು ಏತಕ್ಕಾಗಿ ಇಷ್ಟೊಂದು ಕಷ್ಟಪಡುತ್ತಿರುವಿರಿ?  ಜನ ಕುದುರೆ, ಮತ್ತು ಎತ್ತುಗಳಿಂದ, ನೀರನ್ನು ಎತ್ತುವ ವಿಷಯ ನಿಮಗೆ ತಿಳಿಯದೇ? ನೀವೇಕೆ ಇಷ್ಟು ಇಳಿವಯಸ್ಸಿನಲ್ಲಿ ಕಷ್ಟ ಪಡುತ್ತಿರುವಿರಿ?  ಎಂದು ಕೇಳಿದರು.

                         ಆಗ ವೃದ್ದರು, ಹುಷ್, ಮೆಲ್ಲಗೆ ಮಾತಾಡಿ, ನೀವು ನನಗೆ  ಮಾತ್ರ ಕೇಳುವಂತೆ ಹೇಳಿದರೆ ಪರವಾಗಿಲ್ಲ, ಆದರೆ ನನ್ನ ಮಗ ಇನ್ನೂ  ಚಿಕ್ಕವನು, ಅವನೇನಾದರೂ   ನೀವು ಹೇಳಿದ್ದನ್ನು ಕೇಳಿಸಿಕೊಂಡರೆ ಅಷ್ಟೇ, ಎಂದರು.
  ನೀವು ಏನು ಹೇಳುತ್ತಿರುವಿರಿ, ನನಗೆ ಅರ್ಥವಾಗುತ್ತಿಲ್ಲ ಎಂದರು ಕನ್ಫ್ಯೂಶಿಯಸ್ .

                       ಆಗ ವೃದ್ಧರು, ಹೊಸ ಪದ್ದತಿಯು ಬಳಕೆಗೆ ಬಂದಿರುವುದು ನನಗೂ ಗೊತ್ತಿದೆ, ಆದರೆ ಹೊಸ ಮಾದರಿಗಳೆಲ್ಲವೂ ಮನುಷ್ಯನನ್ನು ದೈಹಿಕ ಶ್ರಮದಿಂದ ಬೇರ್ಪಡಿಸುತ್ತವೆ, ನನ್ನ ಮಗ ದೈಹಿಕ ಶ್ರಮದಿಂದ ಹೊರತಾಗುವುದು ನನಗೆ ಇಷ್ಟವಿಲ್ಲ, ಏಕೆಂದರೆ, ಯಾವಾಗ   ಆತ ದೈಹಿಕ ಶ್ರಮದಿಂದ ದೂರವಾಗುವನೋ, ಅಂದು ಆತ ಜೀವನದಿಂದಲೂ ಬೇರ್ಪಡುವನು, ಎಂದು ಹೇಳಿದರು. ಕನ್ಫ್ಯೂಶಿಯಸ್ ರಿಗೂ ,ಆ ವೃದ್ಧರ ಮಾತು ಸರಿಯೆನಿಸಿತು.

                      ಆದರೆ ಇತ್ತೀಚಿಗೆ, ನಮ್ಮಲ್ಲಿ ದೈಹಿಕ ಕೆಲಸ ಮಾಡುವವರೇ ಬಹಳ ಅಪರೂಪವಾಗಿದ್ದಾರೆ, ಹಾಗೆ ಕೆಲಸ ಮಾಡುವವರು,ಹಣ ಕೊಟ್ಟು ‌ಕೆಲಸ ಮಾಡಿಸಿಕೊಳ್ಳಲಾಗದ ನತದೃಷ್ಟರು ಎಂಬ ಮನೋಭಾವನೆ ಎಲ್ಲರಲ್ಲೂ  ಬೇರೂರಿ ಬಿಟ್ಟಿದೆ. ದೈಹಿಕ ಶ್ರಮ ಪಡದೆ ಹಣ ಕೊಟ್ಟು, ಮಿಶನ್ನುಗಳ ಸಹಾಯದಿಂದ,ಕೆಲಸ ಮಾಡಿಸಿ ಕೊಳ್ಳುವವರು,ಅದೃಷ್ಟಶಾಲಿಗಳು ಎಂಬ ಅನಿಸಿಕೆ ಬಲವಾಗುತ್ತಾ ಹೋಗುತ್ತಿದೆ, ಈಗ  ಆಗಿರುವುದು ಹೀಗೆಯೇ, ಏಕೆಂದರೆ ಅನೇಕರು ದೈಹಿಕ ಶ್ರಮಪಡುವುದನ್ನೆ ಬಿಟ್ಟುಬಿಟ್ಟಿದ್ದಾರೆ. ಕೆಲವರು ಮಾತ್ರ ಅತಿಯಾದ ದೈಹಿಕ ಶ್ರಮ ಹಾಕುತ್ತಿರುವರು, ಅತಿಯಾದ ದೈಹಿಕ ಶ್ರಮವೂ ಒಳ್ಳೆಯದೇನಲ್ಲಾ ,ಕೆಲವು ಸಲ ಅದು ಕೂಡಾ ಹಾನಿಕಾರಕವೇ,  ಅತಿ ಕಡಿಮೆ ದೈಹಿಕ ಶ್ರಮವೂ ಹಾನಿಕಾರವೇ. ಆದರೆ ಸಂಯಕ್ ಶ್ರಮ , ಕ್ರಮವಾದ ಕೆಲಸ.

                     ಪ್ರತಿಯೊಬ್ಬರೂ ದೈಹಿಕ ಕೆಲಸ ಮಾಡಲೇಬೇಕು, ಅತ್ಯಂತ ತೀಕ್ಷ್ಣವಾಗಿ ಶ್ರದ್ದೆಯಿಂದ ಸಂತೋಷದಿಂದ ಧನ್ಯತೆಯಿಂದ ಯಾರು ತಮ್ಮ ಜೀವನದ ಅಂಗವಾದ ದೈಹಿಕ ಕೆಲಸದಲ್ಲಿ ಭಾಗವಹಿಸುವರೊ, ಅವರ ಜೈವಿಕ ಶಕ್ತಿ ಮೆದುಳಿನಿಂದ ನಾಭಿಯವರೆಗೆ ಹರಿಯುತ್ತಿರುವುದರ ಅನುಭವ ಅವರಿಗೇ ತಿಳಿಯುತ್ತದೆ. ಕೆಲಸಕ್ಕೆ ಹೃದಯದ ಅಗತ್ಯವಾಗಲಿ ಮೆದುಳಿನ ಅಗತ್ಯವಾಗಲಿ ಇಲ್ಲ, ಕೆಲಸಕ್ಕೆ ಬೇಕಾಗಿರುವ ಶಕ್ತಿ ನೇರವಾಗಿ ಬರುವುದು ನಾಭಿಯಿಂದಲೇ, ಇದೇ ಅದರ ಮೂಲ.

                       ಸಂಯಕ್ ದೈಹಿಕ ಕೆಲಸವೆಂದರೆ, ಅದನ್ನು ನಾವು ಬೇರೆಯವರಿಗಾಗಿ ಮಾಡುವುದಲ್ಲ, ಅದನ್ನು ನಮಗಾಗಿ, ನಮ್ಮ  ಖುಷಿಗಾಗಿ  ಮಾಡುವುದು.ಇದರಿಂದ ಬೇರೆಯವರಿಗೂ ಉಪಯೋಗವೇನೊ  ಆಗಬಹುದು.ಆದರೆ,ಮುಖ್ಯವಾಗಿ  ನಾವು ಮಾಡುವ ದೈಹಿಕ ಶ್ರಮ,ನಮಗಾಗಿಯೇ, ನಮ್ಮ ಒಳಿತಿಗಾಗಿಯೇ.ನಾವು ಯಾವುದಾದರೂ ದೈಹಿಕ ಕೆಲಸದಲ್ಲಿ ತೊಡಗಿದಾಗ, ನಮ್ಮ ಚೈತನ್ಯದ‌‌ಹರಿವು  ಕೇಂದ್ರೀಕೃತವಾಗುತ್ತಾ ಬರುವುದು. ಅದು ತಲೆಯಿಂದ ಕೆಳಗೆ ನಾಭಿಯ ತನಕ ಬರಲಾರಂಭಿಸುವುದು.  ಶಾರೀರಿಕ ಸರಳತೆಗೆ,ಎಚ್ಚರದ ಮನೋಸ್ಥಿತಿಗೆ , ಮತ್ತು, ಸಂಪೂರ್ಣ ಜಾಗೃತಿಯ ಇರುವಿಕೆಗೆ ಏನಾದರೂ ದೈಹಿಕ ಶ್ರಮ ಅತ್ಯಗತ್ಯ.

   ‌                 ಪ್ರತಿ ವ್ಯಕ್ತಿಯೂ  ಲವಲವಿಕೆಯಿಂದ, ಪ್ರಫುಲ್ಲತೆಯಿಂದ, ಸ್ವಾಸ್ಥ್ಯದಿಂದ ಇರಲು ತನ್ನ ದೇಹಕ್ಕೆ ಎಷ್ಟು ಶ್ರಮದ ಅಗತ್ಯವಿದೆ ಎಂಬುದನ್ನು ಅವರವರ  ದೇಹಕ್ಕೆ ಅನುಕೂಲವಾಗಿ ಕಂಡುಕೊಳ್ಳಬೇಕು. ನಮ್ಮೊಳಗೆ ಎಷ್ಟು ಶುಭ್ರ ಗಾಳಿ ಇರುವುದೊ ಅಷ್ಟು ನಮ್ಮ ಉಸಿರು ಕೂಡಾ ಸುಖದಾಯಕವಾಗಿರುವುದು. ಯಾರ ಜೀವನದಲ್ಲೇ ಆಗಲಿ, ಸಮ್ಯಕ್ ಕೆಲಸ ಇಲ್ಲದಿದ್ದಲ್ಲಿ, ಆರೋಗ್ಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಎಂದಿಗೂ ಸಹ ಸಾಧ್ಯವಿಲ್ಲ. ಧಾರ್ಮಿಕ ಸ್ಥಿತಿಗೆ ಅತ್ಯಂತ ಮುಖ್ಯವಾದ ಒಂದು ಮೆಟ್ಟಿಲು ಸಂಯಕ್ ದೈಹಿಕ ಶ್ರಮವಾಗಿದೆ. 

"ಕಾಯಕವೇ ಕೈಲಾಸ"

ಸ್ಟೋರಿ: "ದಿನಕ್ಕೊಂದು ಹೊಸ ಕಥೆಗಳು" (ಶ್ರೀ ಶಂಕರಚಾರ್ಯರ ಜೀವನ).

                                      " ಶ್ರೀ ಶಂಕರರ ಪರಕಾಯ ಪ್ರವೇಶ"

                                       ಒಂದು ಸಲ ಶ್ರೀ ಶಂಕರಾ ಚಾರ್ಯರು ಮಂಡಲಾ ಎಂಬ ಊರಿಗೆ ಹೋದರು. ಆ  ಊರು ಮಂಡನ ಮಿಶ್ರರ  ಗ್ರಾಮ. ಮಂಡನ ಮಿಶ್ರರ ಹೆಸರಿನಿಂದಲೇ ಆ ಗ್ರಾಮಕ್ಕೆ ಮಂಡಲಾ ಎಂಬ ಹೆಸರು ಬಂದಿತ್ತು.
ಶಂಕರಾಚಾರ್ಯರು ಊರನ್ನು ಪ್ರವೇಶಿಸಿದೊಡನೆಯೇ, ಊರ ಹೊರಗಿನ ಬಾವಿಯಿಂದ ನೀರು ಸೇದುತ್ತಿದ್ದ ಹೆಂಗಸರೊಡನೆ" ಇಲ್ಲಿ ಮಂಡನ ಮಿಶ್ರರ ಮನೆಯೆಲ್ಲಿದೆ?" ಎಂದು ಕೇಳಿದರು.
ಆಗ ನೀರು  ಸೇದುತ್ತಿದ್ದ ಹೆಂಗಸರು ನಗತೊಡಗಿದರು. ಮಂಡನ  ಮಿಶ್ರರ ಮನೆಯನ್ನು ಕೇಳುವುದೇತಕ್ಕೆ? ಊರಿನ ಪ್ರತಿಯೊಬ್ಬರಿಗೂ, ಅವರ ಮನೆ ಪರಿಚಿತವೇ, ಅಷ್ಟೇ ಏಕೆ, ಅವರ ಮನೆಯಿಂದ ಹಾದು ಬರುವ ಗಾಳಿಯು ಕೂಡ ಅವರ ಮನೆಯನ್ನು ತೋರಿಸುವುದು, ಅವರ ಮನೆಯ ಮುಂದೆ ಪಂಜರದಲ್ಲಿರುವ ಗಿಳಿಗಳು ಕೂಡ ಉಪನಿಷತ್ತಿನ ವಾಕ್ಯಗಳನ್ನು ಹೇಳುತ್ತಿರುತ್ತವೆ, ಅವರ ಮನೆಯನ್ನು ನೀವು ಕೇಳಬೇಕಾದುದ್ದೇ ಇಲ್ಲ, ನೀವು ಸುಮ್ಮನೆ ಹೋಗಿ, ನಿಮ್ಮನ್ನು ಅವರ ಮನೆ ತಾನಾಗೇ  ಕರೆಯುವುದು, ನೀವು ಯಾರನ್ನು ಕೂಡಾ ಕೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

                                    ಶಂಕರರು ಮಂಡನ ಮಿಶ್ರರ ಮನೆಯ ಬಾಗಿಲಿಗೆ ಹೋದರು. ಆ ಹೆಂಗಸರು ಹೇಳಿದ ಮಾತು ಸತ್ಯವಾಗಿತ್ತು. ಪಂಜರದಲ್ಲಿದ್ದ ಗಿಳಿಗಳು ವೇದೋಪನ್ನಿಷತ್ತನ್ನು ಉಲಿಯುತ್ತಿದ್ದವು. ಶಂಕರರು ಒಳಗೆ ಹೋಗಿ, ಅವರಿಗೆ ಕೈ ಮುಗಿದು, ತಾವು ಬಂದ ಕಾರಣವನ್ನು ಅವರಿಗೆ ತಿಳಿಸಿ, ಅವರನ್ನು ತಮ್ಮೊಂದಿಗೆ ವಾದಕ್ಕೆ  ಇಳಿಯಲು ಆಹ್ವಾನಿಸಿದರು.

                                    ಮಂಡನಮಿಶ್ರರು, ಶಂಕರಾಚಾರ್ಯರಿಗಿಂತ ವಯಸ್ಸಿನಲ್ಲಿ ಹಿರಿಯರು, ಬಹಳ ಖ್ಯಾತರಾದವರು. ಸುತ್ತಮುತ್ತಲೂ ಅವರ ಹೆಸರು ಬಹಳ ಪ್ರಸಿದ್ಧವಾಗಿತ್ತು. ಶಂಕರಾಚಾರ್ಯರಿಗಿಂತಲೂ  ಹೆಚ್ಚಿನ ಸಂಖ್ಯೆಯಲ್ಲಿ ಅವರಿಗೆ ಶಿಷ್ಯರೂ ಕೂಡಾ ಇದ್ದರು. ಶಂಕರರು ಅವರೊಂದಿಗೆ  ಸತ್ಯಾನ್ವೇಷಣೆಗಾಗಿ ನಿಮ್ಮೊಂದಿಗೆ ನಾನು ವಾದ ಮಾಡ ಬಯಸುತ್ತೇನೆ, ಎಂದು ಹೇಳಿದರು.
   
ಮಂಡನ ಮಿಶ್ರರು ಅವರಿಗೆ ಸ್ವಾಗತವನ್ನು, ನೀಡುತ್ತಾ, ಅಯ್ಯಾ, ನೀನಿನ್ನೂ, ಯುವಕ, ನನಗೆ ನೀನು ಸರಿ ಜೋಡಿಯಲ್ಲ, ನನ್ನ ಅನುಭವ ನಿನಗಿಂತ ಹೆಚ್ಚಿನದು, ನೀನಿನ್ನೂ ಸಣ್ಣವನು, ಎಂದರು. ಆಗ ಶಂಕರರಿಗೆ ಮೂವತ್ತು ವರ್ಷ ವಯಸ್ಸು, ಮಂಡನ ಮಿಶ್ರರಿಗೆ ಐವತ್ತಕ್ಕಿಂತ ಹೆಚ್ಚಿನ ವಯಸ್ಸಾಗಿತ್ತು. ಹಾಗಾಗಿ ಅವರು ನಾನು ನಿನ್ನ ತಂದೆಯ ವಯಸ್ಸಿನವನು, ನನಗೆ ನಿನಗಿಂತ ಅನುಭವ ಜಾಸ್ತಿ, ಆದ್ದರಿಂದ ಈ ವಾಗ್ ಯುದ್ಧ ಸರಿಸಮಾನ ಎನ್ನಿಸುವುದಿಲ್ಲ, ಹಾಗಾಗಿ, ನಿನಗೊಂದು ಅನುಕೂಲ ಒದಗಿಸಿಕೊಡುತ್ತೇನೆ, ತೀರ್ಪು, ನೀಡುವವರನ್ನು  ನೀನೇ, ನಿನ್ನ ಇಚ್ಛೆಯಂತೆ  ಆರಿಸಿಕೊಳ್ಳಬಹುದು. ಸೋಲು ಯಾರಿಗೆ , ಗೆಲುವು ಯಾರಿಗೆ  ಎಂದು ಅವರೇ ತೀರ್ಮಾನ ನೀಡುವರು  ಎಂದು ಹೇಳಿದರು.

                                   ಇಬ್ಬರೂ ಶತ್ರುಗಳೇನಲ್ಲ, ಇದೊಂದು ಪ್ರೇಮ ಕಲಹವಿದ್ದಂತೆ, ಇದರಲ್ಲಿ ಯಾವ ಹೊಡೆದಾಟ, ಬಡಿದಾಟವೂ ಇರಲ್ಲಿಲ್ಲ. ಒಬ್ಬ ವೃದ್ಧನು, ಒಬ್ಬ ಯುವಕನಿಗೆ ತನ್ನ ಮಗನ ರೀತಿಯಲ್ಲಿ ಸ್ವಾಗತಿಸಿ, ಬೇಕಾದ ಸವಲತ್ತು ಸೌಕರ್ಯಗಳನ್ನು ನೀಡುತ್ತಿರುವಂತಿತ್ತು. ಆದರೆ ಶಂಕರರು, ಮಂಡನ ಮಿಶ್ರರ ಖ್ಯಾತಿಗೆ ತಕ್ಕಂತೆ, ಅವರಿಗೆ ಗೌರವ ನೀಡಿ, ಅವರಿಗೆ ಸರಿಹೋಗುವಂತಹ ತೀರ್ಪುಗಾರರನ್ನೇ  ಸಭೆಯಲ್ಲಿ ಹುಡುಕಿದರು.  ಮಂಡನ ಮಿಶ್ರರ ಧರ್ಮಪತ್ನಿ, ಭಾರತಿ ದೇವಿಯನ್ನು ಬಿಟ್ಟು ,ಬೇರೆ ಯಾರೂ ಅಷ್ಟು ಸರಿ ಎನಿಸಲಿಲ್ಲ ಅವರಿಗೆ. ಅದಕ್ಕಾಗಿ ಅವರು, ನಿಮ್ಮ ಧರ್ಮಪತ್ನಿಯವರೇ ನಿರ್ಣಾಯಕ ರಾಗಲಿ ಎಂದು ಹೇಳಿದರು.
                                    ಇದಕ್ಕೆ ಭಾರತಿ ದೇವಿಯವರು ಒಪ್ಪಿಕೊಂಡರು.   ಶಂಕರರಲ್ಲದೇ, ಬೇರೆ ಯಾರೇ ಆಗಿದ್ದರೂ , ಈ ತೀರ್ಮಾನ  ಮಾಡುತ್ತಿರಲಿಲ್ಲ, ಏಕೆಂದರೆ, ಪತ್ನಿಯನ್ನು ನಿರ್ಣಾಯಕಳಾಗಿ ಆರಿಸಿದರೆ ಅವಳು ಬಹುಶಃ  ತನ್ನ ಪತಿಯ ಪಕ್ಷವನ್ನೇ ಆರಿಸಬಹುದು ಎಂದುಕೊಳ್ಳುತ್ತಿದ್ದರು. ಆದರೆ ಇದೊಂದು ಸತ್ಯಾನ್ವೇಷಣೆಯ ವಿವಾದವಾಗಿತ್ತು.ವಾದ ವಿವಾದವೂ ನಡೆಯಿತು, ಎಲ್ಲವೂ ಮುಗಿದ ನಂತರ ಪತ್ನಿಯು ಪತಿಯನ್ನು ಸೋತನೆಂದು ನಿರ್ಣಯಿಸಿ, ಶಂಕರರು ಗೆದ್ದರೆಂದು ತುಂಬಿದ ಸಭೆಯಲ್ಲಿ ತೀರ್ಮಾನವಿತ್ತಳು.
   ಆದರೆ ಆಕೆ ಇನ್ನೂ ಒಂದು ಮಾತು ಹೇಳಿದಳು, ಈ ಸೋಲು ಇನ್ನೂ ಅಪೂರ್ಣ, ಏಕೆಂದರೆ ನಾನು ಅವರ ಅರ್ಧಾಂಗಿನಿ, ನೀವು ಮಂಡನ ಮಿಶ್ರರನ್ನು , ಅರ್ಧ ಭಾಗ ಮಾತ್ರ ಗೆದ್ದಿರುವಿರಿ, ಈಗ ನೀವು ಅವರ ಅರ್ಧಾಂಗಿನಿಯಾಗಿರುವ ನನ್ನಲ್ಲಿ ಕೂಡಾ ವಾದ ಮಾಡಬೇಕು ಎಂದಳು.ಎಲ್ಲರಿಗೂ ಇದಂತೂ ತುಂಬಾ ತಮಾಷೆ ಎನಿಸಿತು. ಆದರೆ ಅವಳು ಹೇಳಿದ ಮಾತು ಸರಿಯಾಗಿತ್ತು, ಏಕೆಂದರೆ ಪತ್ನಿಯಾದವಳು ಅರ್ಧಾಂಗಿನಿ ಎನಿಸಿಕೊಂಡಿರುವಾಗ, ಅರ್ಧ ಭಾಗ , ಮಾತ್ರ ಮಂಡನ ಮಿಶ್ರರು ಸೋತಂತಾಯಿತು . ಇದನ್ನು ಶಂಕರರು ಅಲ್ಲಗೆಳೆಯಲಾರದೆ ಒಪ್ಪಿಕೊಂಡರು. ಇದು ಅವರಿಗೆ ಕಸಿವಿಸಿಯನ್ನುಂಟು ಮಾಡಿತು.
   ಆದರೆ ಅವರ ಪತ್ನಿ, ಮಂಡನಮಿಶ್ರರನ್ನು ಪರಾಜಿತರೆಂದು ಘೋಷಿಸಿ ಬಿಟ್ಟಳು.  ಆದರೆ, ಮಂಡನ ಮಿತ್ರರು ಅವಳ ಮಾತಿನ ಪ್ರಕಾರ ಅರ್ಧ ಸೋತಂತಾಗಿತ್ತು, ಅವರ ಅರ್ಧಾಂಗಿನಿ ಯಾದ ತನ್ನನ್ನು ವಾದದಲ್ಲಿ ಸೋಲಿಸಿದರೆ ಮಾತ್ರ, ಅವರು ಪೂರ್ತಿ ಸೋತಂತಾಗುವುದು ಎಂದು ನಿರ್ಣಯಿಸಿದಳು.

                                 ಶಂಕರರೇನೊ  ಇದಕ್ಕೆ ಒಪ್ಪಿಕೊಂಡರು. ಆದರೆ, ಭಾರತಿದೇವಿ ಕೇಳಿದ ಕೆಲವು ಪ್ರಶ್ನೆಗಳಿಂದ ಶಂಕರರು ತಬ್ಬಿಬ್ಬಾದರು. ಏಕೆಂದರೆ ಆಕೆ ಬ್ರಹ್ಮ ಜ್ಞಾನದ ಬಗ್ಗೆ ಯಾವ ಪ್ರಶ್ನೆಯನ್ನು ಕೇಳಲಿಲ್ಲ, ಬ್ರಹ್ಮ ಜ್ಞಾನದದಲ್ಲಿ ಮಂಡಲ ಮಿಶ್ರರು ಸೋತುಹೋದುದನ್ನು ಕಣ್ಣಾರೆ ಕಂಡ ಆಕೆಗೆ, ಈತನೊಂದಿಗೆ ಬ್ರಹ್ಮತತ್ವದ ಬಗೆ ವಾದ ಮಾಡಿ ಗೆಲ್ಲಲು ಸಾಧ್ಯವಿಲ್ಲವೆಂದು ಅವಳಿಗೆ ಸ್ಪಷ್ಟವಾಗಿತ್ತು, ಅಲ್ಲದೆ ಮಂಡನ ಮಿಶ್ರರು, ಆ ಬಗ್ಗೆ ತನಗಿಂತ ಹೆಚ್ಚು ತಿಳಿದವರೆಂದೂ ಅವಳಿಗೆ ತಿಳಿದಿತ್ತು. ಅವರೇ ಶಂಕರರೊಂದಿಗೆ ಸೋತಿರುವಾಗ, ತಾನು ಇನ್ನು ಬ್ರಹ್ಮ ತತ್ವದ ಬಗ್ಗೆ ಮಾತನಾಡುವುದು ವ್ಯರ್ಥವೆನಿಸಿತು. ಏಕೆಂದರೆ ಬ್ರಹ್ಮ ತತ್ವದಲ್ಲಿ ಮಂಡನ ಮಿಶ್ರರು ತನಗಿಂತ ಶ್ರೇಷ್ಠರೆಂದು ತಿಳಿದೇ ಅವರನ್ನು ತಾನು ಮದುವೆಯಾದದ್ದು. ಹೀಗಿರುವಾಗ ಈಗ  ಪತಿ ,ವಾದದಲ್ಲಿ  ಪೂರ್ತಿಯಾಗಿ ಸೋಲುವುದನ್ನೂ ಅವಳು ಸಹಿಸಲಿಲ್ಲ. ಅದಕ್ಕಾಗಿಯೇ ಅವಳು ಕಾಮವಾಸನೆಯ ಬಗ್ಗೆ ಶಂಕರರಿಗೆ ಪ್ರಶ್ನೆಗಳನ್ನು ಕೇಳುತ್ತಾ ವಾದಕ್ಕೆ ಇಳಿದಳು.

                                  ಶಂಕರರು ಯುವಕರು, ಅವಿವಾಹಿತರು. ಅವಳ ಪ್ರಶ್ನೆಯಿಂದ ಪೇಚಿಗೆ ಸಿಲುಕಿದರು. ಈ ಪ್ರಶ್ನೆಗೆ ಉತ್ತರ ನೀಡಲು, ನಾನು ಅವಿವಾಹಿತ ಬ್ರಹ್ಮಚಾರಿ, ಆದುದರಿಂದ ತನಗೆ ಪ್ರೇಮವೂ ತಿಳಿಯದು ಕಾಮವೂ ತಿಳಿಯದು, ಅದರ ಅನುಭವವಿಲ್ಲದ ತಾನು ತಟ್ಟನೆ ಉತ್ತರಿಸಿದರೆ, ಅನುಭವವಿಲ್ಲದ ಜ್ಞಾನ ನಿಸ್ಸಾರವಾದದ್ದು, ಅದಕ್ಕೆ ಬೆಲೆ ಇರುವುದಿಲ್ಲ, ಎಂದು ತಿಳಿದು, ಬ್ರಹ್ಮ ತತ್ವವನ್ನು ಓದಿ, ಆ ವಿಚಾರದಲ್ಲಿ ಮಂಡನಮಿತ್ರರು , ನನ್ನೊಂದಿಗೆ ಚರ್ಚಿಸಿ ಆ ವಿಚಾರದಲ್ಲಿ ಸೋತಂತೆ, ಕಾಮವಾಸನೆಯ ಬಗ್ಗೆಯೂ ನನ್ನೊಳಗಿರುವ ಪುಸ್ತಕ ಜ್ಞಾನವು ತಿರುಳಿಲ್ಲದಂತಾಗುವುದು, ಇದರಿಂದ ನನಗೂ ಸೋಲು ಖಚಿತ ಎಂದು ತಿಳಿದು, ಈ ವಿಷಯದಲ್ಲಿ ನನ್ನದು ಕೇವಲ ಕೇಳಿಕೆಯ ಜ್ಞಾನ, ಅನುಭವದಿಂದ ಬಂದ ಜ್ಞಾನವಲ್ಲ. ಆದರೆ ಭಾರತಿ ದೇವಿಯದು ಅನುಭವದಿಂದ ಬಂದ ಜ್ಞಾನ. ಈಗ ನಾನು ವಾದಕ್ಕೆ ಹೋದರೆ ತನಗೆ ಸೋಲು ಖಚಿತವೆಂದು ತಿಳಿದು, ಶಂಕರಾಚಾರ್ಯರು ಅದರ ಬಗ್ಗೆ ಅನುಭವ ಪಡೆದು ಹಿಂತಿರುಗಿ ಬರುವೆ, ನೀವು  ನನಗೆ ಆರು ತಿಂಗಳ ಸಮಯ  ನೀಡಿ ಎಂದು ಕೇಳಿದರು.
    ಇದು ಸತ್ಯವಾದದ್ದರಿಂದ, ಭಾರತಿದೇವಿ ಇದಕ್ಕೆ ಒಪ್ಪಿಕೊಂಡು, ಒಳ್ಳೆಯದು ನಿನಗೆ ಆರು ತಿಂಗಳ ಸಮಯ ಇದೆ, ಅನುಭವ ಪಡೆದು ನಂತರ ಬರಬಹುದು, ಎಂದು ಹೇಳಿದಳು.

                             ಶಂಕರಾಚಾರ್ಯರಿಗೆ, ಈಗ ಧರ್ಮ ಸಂಕಟಕ್ಕೆ ಸಿಲುಕಿದಂತಾಯಿತು, ಬಹಳವಾಗಿ ಯೋಚಿಸಿ, ತಮ್ಮ ದೇಹವನ್ನು ತ್ಯಜಿಸಿ, ಮೃತನಾದ ಒಬ್ಬ ರಾಜನ ಶರೀರವನ್ನು ಹೊಕ್ಕು ಅದರ ಮೂಲಕ, ಆರು ತಿಂಗಳ ಕಾಲ, ಭೌತ ಸುಖ, ಕಾಮವಾಸನೆಗಳ ಅನುಭವ ಪಡೆದು, ಹೇಳಿದ ಸಮಯಕ್ಕೆ ಸರಿಯಾಗಿ ಹಿಂತಿರುಗಿ ಬಂದರು.

                            ಅವರ ಮುಖವನ್ನು ನೋಡಿದೊಡನೆ ಭಾರತಿದೇವಿ, ಇನ್ನು ನಿಮ್ಮೊಡನೆ ವಾದ ವಿವಾದದ ಅವಶ್ಯಕತೆ ಇಲ್ಲ, ನೀವು ತಿಳಿದೇ ಬಂದಿರುವುದು ನಿಮ್ಮ ಮುಖ ನೋಡಿದರೆ ಗೊತ್ತಾಗುತ್ತದೆ, ಇಲ್ಲಿಗೆ ವಿವಾದ ಮುಗಿಯಿತು, ನೀವೇ ಗೆದ್ದಿರುವಿರಿ, ನನ್ನನ್ನು ನಿಮ್ಮ ಶಿಷ್ಯೆಯಾಗಿ ಸ್ವೀಕರಿಸಿ , ಎಂದಳು. ಇಲ್ಲಿ ಇವರಿಬ್ಬರಲ್ಲೂ, ಯಾವ ದ್ವೇಷ ಭಾವವೂ, ಇರಲಿಲ್ಲ. ಪರಸ್ಪರ ಅಪಾರವಾದ ಶ್ರದ್ಧೆ, ಒಬ್ಬರ ಬಗ್ಗೆ ಒಬ್ಬರಲ್ಲಿ ಗೌರವ ಭಾವದಿಂದ ಮಾಡಿದ ವಾದವಿವಾದವಾಗಿತ್ತು.

                           ಕೊನೆಯಲ್ಲಿ, ಮಂಡನ ಮಿಶ್ರ, ಹಾಗೂ ಅವರ ಪತ್ನಿ ಭಾರತಿ ದೇವಿ , ಶಂಕರರ ಶಿಷ್ಯರಾದರು. ಶಂಕರರು, ಸೋತವರನ್ನು , ಎಬ್ಬಿಸಿ ಅವರಿಗೆ ನವಚೈತನ್ಯವನ್ನು ತುಂಬಿದರು. ಯಾರ ಮನೆಯಲ್ಲಿ ಕತ್ತಲೆ ಇತ್ತೊ ಅಲ್ಲಿ ದೀಪವನ್ನು ಬೆಳಗಿಸಿದರು. ಹಾಗಾಗಿ ಅವರ ಚರಣಗಳಲ್ಲಿ ಬಾಗಿದವರು ಅವರಿಗೆ ಸೋತು ಬಾಗಲಿಲ್ಲ. ಅಲ್ಲಿ ಸೋಲಿನ ಭಾವವಿರಲಿಲ್ಲ, ಧನ್ಯತಾ ಭಾವವಿತ್ತು . ಯಾರು ಸೋತರೊ, ಅವರು, ಅವರ ಶಿಷ್ಯತ್ವವನ್ನು ಅವರಾಗೇ  ಕೈಗೊಂಡರು. ಶಂಕರರ ಚರಣಗಳಲ್ಲಿ ಪರಮಾತ್ಮನ ಚರಣಗಳನ್ನು ಕಂಡುಕೊಂಡರು.
                                

                                          "ಕಾಯಕದ ಜೊತೆಗೆ ದೇಶ ಸುತ್ತು"

 

                                     

FlipKart ಕಂಪನಿ- ಭಾರತೀಯ ಇ-ಕಾಮರ್ಸ್ ಉದ್ಯಮದಲ್ಲಿ 48% ಮಾರುಕಟ್ಟೆಯೇ ಪಾಲುದಾರ- "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್"

           "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್   ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್ * ಸ್ಥಾಪಕರು : ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್  (...