!!! ʼಯಾವು ದಿನ ನೀನು ಸ್ಥಿರವಾಗಿ ನೀಲ್ಲುವೇ ತಾಯಿʼ?
ಹಣವಂತರಲ್ಲಿಯು ಕೂಡ ಸ್ಥಿರವಾಗಿ ನಿಲ್ಲದ ನೀನು, ಬಡವರಲ್ಲಿ ಬಂದು ಶ್ರೀಮಂತರನ್ನಾಗಿ ಮಾಡಿ ಅಲ್ಲಿಯು ನಿಲ್ಲದ ನೀನು ಮತ್ತೇ ಯಾರಲ್ಲಿ ಸ್ಥಿರವಾಗಿ ನಿಲ್ಲತ್ತೀಯಾ ತಾಯಿ ಅದೇ ನಿನ್ನ ಪವಾಡ, ಹೀಗಾಗಿ ಎಲ್ಲಾರ ಮನಸ್ಸಿನಲ್ಲಿ ನೀನು ಶಾಸ್ವತವಾಗಿ ನೆಲೆ ನಿಂತಿದ್ದಿಯಾ ತಾಯಿ,ನಿನ್ನ ಹುಡುಕುವುದೇ ಜೀವನ ಪರ್ಯಂತ ಒಂದು ಕೆಲಸವಾಗಿದೆ ಅಮ್ಮ ..
"ಲಕ್ಷ್ಮೀ ನೀನು ಯಾರ ಹತ್ತೀರ ಸ್ಥಿರವಾಗಿ ನಿಲ್ಲುವೇ"?
ಎಲ್ಲರೂ ವರಮಹಾಲಕ್ಷ್ಮಿ ಹಬ್ಬದ ಸಡಗರಲ್ಲಿದ್ದೀರ ಅದು ನನಗೆ ತುಂಬಾ ಸಂತೋಷ. ಆದರೆ ನೀವೆಲ್ಲರೂ ಈ ಹಬ್ಬವನ್ನು ಆಚರಿಸುವ ಮುನ್ನ ಯಾವುದೇ ಒಂದು ವಿಚಾರವನ್ನು ತಿಳಿದು ಆಚರಿಸಿ ಆವಾಗಲೇ ಈ ಹಬ್ಬಕ್ಕೆ ಒಂದು ಬೆಲೆ, ಈ ವರಮಹಾಲಕ್ಷ್ಮಿ ಹಬ್ಬವೂ ಇತ್ತಿಚಿನ ದಿನಗಳಲ್ಲಿ ತಾಯಿ ಮಹಾಲಕ್ಷ್ಮೀಯ ಸೇವೆಗಿಂತ ಡಂಭಾಚಾರವೇ ಅತಿಯಾಯಿತು ಅನಿಸುತ್ತಿದೆ ಅಲ್ಲವೇ..? ಈ ಹಬ್ಬದ ಆಚರಣೆಗಿಂತ ಬರೀ ಅಡಂಬರವೇ ತುಂಬಿ ತುಳುಕುತ್ತಿದೆ. ನಿಜವಾದ ಹಬ್ಬದ ಅರ್ಥವೇ ಅನರ್ಥವಾಗುತ್ತಿದೆ,ಮೊದಲು ನಾವು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ನಮಗೆ ತಿಳಿವಳಿಕೆ ಇರಬೇಕು.
ಹಳೆಯ ಕಾಲದಲ್ಲಿ ಕಳಸವನ್ನು ಇಟ್ಟು ಪೂಜೆ ಸಲ್ಲಿಸುತ್ತಿದ್ದರು ಆದರೆ ಆ ಪದ್ಧತಿ ಇವಾಗ ಮಾಯವಾಗುತ್ತಿದ್ದೆ, ಆ ಪದ್ದತಿಯು ಈಗ ಪ್ಲಾಸ್ಟಿಕ್ ಗೊಂಬೆಗಳಿಗೆ ಅಲಂಕಾರ ಮಾಡುವ ಮೂಲಕ ಆ ಪೂಜೆ ಪದ್ದತಿ ಎಷ್ಟು ಸರಿ..? ಯಾಕೆ ಈ ಸಮಾರಂಭ ಈ ರೀತಿ ಆಚರಣೆಗೆ ಒಳಪಡುತ್ತಿದೆ , ಅದು ನನಗೆ ತುಂಬಾ ಬೇಜಾರು ತಂದಿದೆ , ಸುಖ- ಸುಮ್ಮನೆ ಈ ರೀತಿ ಹುಚ್ಚು ಭ್ರಮೆಯನ್ನು ಬಿಟ್ಟುಬಿಡಿ, ಅಡಂಬರದಿಂದ ಪೂಜೆ ಮಾಡಿದರೆ ಮಾತ್ರ ದೇವರು ಒಲಿಯುತ್ತಾನೆ ಎಂಬ ಭಾವನೆ ನಿಮ್ಮಲ್ಲಿ ಮೂಡಬಾರದು, ದೇವರು ಒಲಿಯುವುದು ಅನನ್ಯ ನಿಶ್ಕಲ್ಮಶ ಭಕ್ತಿಗೆ ಮಾತ್ರ. ಯಾರು ಅಕ್ಕ ಪಕ್ಕದ ಮನೆಯವರು ಮಾಡುತ್ತಾರೆ ಎಂದು ಪೂಜೆ ಮಾಡಲುಹೋಗಬೇಡಿ ಅದರಿಂದ ನಿಮಗೆ ಯಾವುದೆ ಪ್ರಯೋಜನವಿಲ್ಲ, ಸುಖ-ಸುಮ್ಮನೆ ಸಾಲಸೋಲ ಮಾಡಿ ದುಂದುವೆಚ್ಚ ಮಾಡಿ ಜೀವನದಲ್ಲಿ ಕಷ್ಟ ತಂದು ಕೊಳ್ಳಬೇಡಿ.
ಯಾರೇ ಆಗಲಿ ಮೊದಲು ಆ ಆಚರಣೆ ಬಗ್ಗೆ ತಿಳಿದುಕೊಳ್ಳಿ ನಮ್ಮ ಮನೆಗಳಲ್ಲಿ ಆಚರಣೆ ಪದ್ಧತಿಯಲ್ಲಿ ನಡೆದುಕೊಂಡು ಬಂದಿದ್ದರೆ ಅದನ್ನು ನೀವು ಮುಂದುವರಿಸಿ ಹಾಗೆ ಈ ಎಲ್ಲಾ ಆಚರಣೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಪಾಲಿಸಿಕೊಂಡು ಹೋಗಿ ಅದು ತುಂಬಾ ಸಂತೋಷ.ಸರಿಯಾಗಿ ಆಲೋಚಿಸಿ ಅವಲೋಕಿಸಿ ಆರಂಭಿಸಿ ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಸರಿಯಾದ ಮಾಹಿತಿಯನ್ನು ನಾವು ನೀಡದಿದ್ದರೆ ಸುಖ-ಸುಮ್ಮನೆ ಅವರನ್ನು ಗೊಂದಲಕ್ಕೆ ನೂಕಬೇಡಿ. ಲಕ್ಷ್ಮೀ ಎಂದರೇ ಹಣ ಇದ್ದರೆ ಮಾತ್ರ ಅನ್ನುವ ಹಾಗೇ ಆಗಬಾರದು ಇಲ್ಲ-ಸಲ್ಲದ ಗೊಂದಲಕ್ಕೆ ತಳಬೇಡಿ.ಆರೋಗ್ಯ ಸಮೇತ ಐಶ್ವರ್ಯ ಬರಬೇಕು ಅದರ ಜೊತೆಗೆ ನಾವೂ ಗಳಿಸಿದ ಸಂಪತ್ತು ನಾವು ಅನುಭವಿಸಬೇಕು, ಹಾಗೆ ಅದು ಸತ್ಕಾರ್ಯಕ್ಕೆ ಉಪಯೋಗವಾಗಬೇಕು ಅದನ್ನು ಬಿಟ್ಟು ಬೇರೆಯವರ ಪಾಲದರೆ ಏನು ಪ್ರಯೋಜನೆ?
ಅದು ಬಿಟ್ಟು ದುಷ್ಚಟಗಳಿಗೆ ಅನಾವಶ್ಯಕವಾಗಿ, ಅಧರ್ಮ ಕಾರ್ಯಗಳಿಗೆ ನಿಮ್ಮ ಬುದ್ದಿ ವಿನಿಯೋಗವಾದರೇ ಏನು ಉಪಯೋಗ ನೀವೆ ಹೇಳಿ? ಎಲ್ಲರೂ ಹೇಳುತ್ತಾರೆ ಅವರಿಗೆ ಏನು ಕಡಿಮೆ ಅವರ ಹತ್ತಿರ ಇರುವ ಆಸ್ತಿ ಏಳು ತಲೆಮಾರಿಗೆ ಕುಳಿತು ತಿನ್ನುವಷ್ಟು ಇದೆ ಅಂತ ಹೇಳತ್ತಾರೆ, ಹಾಗಂತ ಒಂದು ಸಲ ಯೋಚಿಸಿ ನೋಡಿ ಒಮ್ಮೆ ನಮ್ಮ ನಮ್ಮ ಮನೆತನಗಳಲ್ಲಿ ಯಾರಾದರೂ ಸಂಪಾದಿಸಿದ ಸಂಪತ್ತು ಏಳು ತಲೆಮಾರುಗಳ ತನಕ ಉಳಿದುಕೊಂಡು ಬಂದಿದೆಯಾ...? ಚಿಂತೆ ಬೇಡ ಒಂದು ಬಿಲ್ವಪತ್ರೆ ಆ ಲಕುಮಿಗೆ ಇಟ್ಟು ಆ ದೇವಿಗೆ ಶುದ್ದವಾಗಿ ಅನ್ನ ಮಾಡಿ ಅದಕ್ಕೆ ಸ್ವಲ್ಪ ಹಸುವಿನ ತುಪ್ಪ ಹಾಕಿ ನೈವೇದ್ಯ ಮಾಡಿ ಅದೇ ಆ ಮಹಾಲಕ್ಷ್ಮಿಗೆ ಪರಮ ಪ್ರಸಾದ.
ಆ ತಾಯಿಗೆ ಭಕ್ತಿಯಿಂದ ಪೂಜಿಸಿರಿ ನಿಮ್ಮ ಕೋರಿಕೆಯನ್ನು ಪೊರೈಸಿಕೋಳ್ಳಿ. ಈ ಒಂದು ಮಂತ್ರದಿಂದ ಸಕಲವು ಸಿದ್ದಿ ಪ್ರಾಪ್ತಿಯಾಗುವುದು ಅದೇ "ಶ್ರೀ ಮಹಾಲಕ್ಷ್ಮಿಯ ಮಹಾಮಂತ್ರ" "ಶ್ರೀಂ" ಈ ಬೀಜಾಕ್ಷರಿ ಮಂತ್ರವನ್ನು ಯಾರು ಯಾವಾಗ ಬೇಕಾದರೂ ಹೇಳಬಹುದು. ಪ್ರತಿದಿನ ಈ ಮಹಾಮಂತ್ರ ನಿಮ್ಮ ದಿನನಿತ್ಯ ಕೆಲಸ ಮಾಡುವಾಗ ಹಾಗೂ ಮನೆಯಲ್ಲಿ ಇದ್ದರು ಕೂಡ ನೀವು ಮಾಡಬಹುದು. ಈ ಆಚರಣೆಗಳು ಯಾವುದೇ ಕಾರಣಕ್ಕು ಅಸಡ್ಡೆ ಮಾಡಬೇಡಿ ಸ್ನೇಹಿತರೆ ನಿಮಗೆ ಎಲ್ಲಾವು ದೊರೆಯುತ್ತದೆ. " ಯಶ್ಸಸು ನಿಮಗೆ ಕಟ್ಟಿಟ್ಟ ಬುತ್ತಿ"...
!!! "ವರ ಮಹಾಲಕ್ಷ್ಮೀ ಹಬ್ಬದ ಶುಭಾಷಯಗಳು"!!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಮಸ್ಸೆಗಳಿದ್ದರೆ , ನೇರವಾಗಿ ವಿಚಾರಿಸಿ, ಸಲಹೆಗಳು ನೀಡಿ.