" ನೆಮ್ಮದಿಯ ಬದುಕಿಗೆ ಹಣ ಮುಖ್ಯ ನಾ, ಸಂಬಂಧಪಟ್ಟ ಸಂಬಂಧಗಳು ಮುಖ್ಯ"?


  "ತಂದೆಗೆ ತಕ್ಕ ಮಗ ಆಗುವುದು ಯಾವಾಗ??!"

            ತಂದೆ-ತಾಯಿ ತಾವು ಸಾಕಿದ ಮಗನನ್ನು ಮಮತೆಯಿಂದ ಬೆಳೆಸಿದ್ದರು,ವಿದ್ಯಾಭ್ಯಾಸವನ್ನು ಕೂಡಾ  ಉತ್ತಮ ಗುಣಮಟ್ಟದಲ್ಲಿ ಕೊಡಿಸಿದರು. ಮಗನೂ ಸಹ ಕಷ್ಟಪಟ್ಟು    ಓದಿ, ವಿಧೇಯನಾಗಿ ನಡೆದು, ವಿಧ್ಯಾಭ್ಯಾಸ ಮುಗಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದನು, ಒಂದು ಉತ್ಕೃಷ್ಟ ಕಂಪನಿಯಲ್ಲಿ ಕೆಲಸವೂ ಕೂಡ ಹುಡುಕಿಕೊಂಡು ಬಂತು, ಆ ಮೊದಲನೇ ಸಂಬಳವೂ ಸಹ ಅವನ ಕೈ ಸೇರಿತು .

                 ತನ್ನ ಮೊದಲ ಸಂಬಳವನ್ನು ತಾಯಿಯ ಕೈಗೆ ಕೊಟ್ಟು ನಮಸ್ಕರಿಸಿದ, ತಾಯಿಗೆ ತುಂಬಾ ಖುಷಿಯಾಯಿತು. ಅವಳು ಒಂದು ಕ್ಷಣ ಆಲೋಚಿಸಿ, ಮೊದಲು ಇದನ್ನು ನಿಮ್ಮ ತಂದೆಯ ಕೈಗೆ ಕೊಡು ಎಂದಳು ಆಗ ಮಗನು ತಾಯಿಯ ಮಾತು ಕೇಳಿಸಿಕೊಂಡುರು ಸಹ, ಕಿವಿಗೆ ಕೇಳಿದರೂ ಕೇಳದಂತೆ ಇದ್ದನು,ಮತ್ತೆ ಅದೇ ಮಾತು ತಾಯಿಯು ಹೇಳಿದ್ದಳು, ತಂದೆಯ ಕೈಗೆ ಕೊಡುವಂತೆ ಜೋರಾಗಿ ಹೇಳಿ,ಆ ಹಣವನ್ನುಮರಳಿ ಮಗನ ಕೈಗೆ ನೀಡಿದಳು.

                 ಆಗ ಮಗನು, ಇಲ್ಲ ಅಮ್ಮ ನಾನು ಕೊಡುವುದಿಲ್ಲ ಎಂದನು.ಯಾಕೆ ಈ ರೀತಿ ಹೇಳತ್ತೀಯ ಮಗು, ಹೇಳಬಾರದು ಕಂದಾ ಆ ರೀತಿ ಎಂದಳು. ನನ್ನಿಂದ ಸಾಧ್ಯವಿಲ್ಲ!!ಎಂದನು. ಇದರಿಂದ ತಾಯಿಗೆ ಸಿಟ್ಟು ಬಂದಿತು,ಇದುವರೆಗೆ ವಿಧೇಯನಾಗಿದ್ದ ಮಗನ ಈ ವರ್ತನೆಗೆ ನೊಂದಳು, ಬೆಳೆದ ಮಗ ಮುಂದೆ ಮನೆಯ ಜವಾಬ್ಧಾರಿ ಹೊರುವ ಈತ ಹೀಗೇಕೆ ???? ಎಂದು ಮನದಲ್ಲಿಯೇ ಸಂಕಟ ಮಾಡಿಕೊಂಡಳು. ಕೊನೆಗೆ ಏನಾಯಿತೋ ಏನೋ, ಮಗನೆಂದು ನೋಡದೆ ತಕ್ಷಣವೇ ಕಪಾಳಕ್ಕೆ ಚಟಾರ್ ಎಂದು ಭಾರಿಸಿದಳು. ಕೋಪದಿಂದ ಬೈದಳು ಹಾಗೆ ಹೀಗೆ ಅಂದಳು. ಮುಂದುವರೆದು,ಮೊದಲ ಸಂಬಳ ತೆಗೆದುಕೊಂಡ ಕೂಡಲೆ ನೀನು ದೊಡ್ಡವನಾದಿಯೇನೋ. ಬಹಳ ದೊಡ್ಡ ವ್ಯಕ್ತಿ ಆಗಿಬಿಟ್ಟಿಯೇನೋ,ಛೇ!, ಎಂದು ಮೂದಲಿಸಿದಳು.
ತಂದೆಗೆ ಕೊಡು ಎಂಬ ನನ್ನ  ಮಾತನ್ನು ಸಹ ದಿಕ್ಕರಿಸಿರುವಿ. ಇದೇನಾ ನೀನು ಇದುವರೆಗೂ ಕಲಿತುಕೊಂಡ ಸಂಸ್ಕಾರ ಎಂದು ಬೈದಳು.

               ಮಗನು ತನ್ನ ಕೆನ್ನೆಯನ್ನು ಸವರಿಕೊಳ್ಳತ್ತಾ ಕಣ್ಣಿಂದ ಸಿಡಿದ ಹನಿಯನ್ನು ಅಂಗೈಯಿಂದ  ಒರೆಸಿಕೊಳ್ಳುತ್ತಾ  ದುಃಖದಿಂದ ತಾಯಿಗೆ ಹೇಳುತ್ತಾನೆ. ಇಲ್ಲ ಅಮ್ಮ , ಅಮ್ಮ ನನ್ನ ತಂದೆಯ ಕೈ ಯಾವತ್ತೂ ಮೇಲೆಯೇ ಇರಬೇಕು,ಕೆಳಗೆ ಕೈ ಚಾಚ ಕೂಡದು ಹಾಗೆಯೇ ಮೇಲೆಯೇ ಇರಲಿ ಎಂಬುದೇ ನನ್ನ ಅದಮ್ಯ ಆಸೆ ಅಂದನು. ಇದುವರೆಗೂ ಅವರಿಂದ ನಾನು ಪಡೆದುಕೊಳ್ಳುವಾಗ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಈಗ ನಾನು ಅವರಿಗೆ ಇದನ್ನು ಕೊಡುವಾಗ ಅವರ ಕೈ,ನನ್ನ ಕೈ- ಕೆಳಗೆ ಬರುತ್ತದೆ ಅದು ನನಗಿಷ್ಟವಿಲ್ಲ, ಎಂದೆಂದೂ  ಸರ್ವಕಾಲಕ್ಕೂ ನನ್ನ ತಂದೆಯ ಕೈ ಮೇಲೆಯೇ ಇರಬೇಕು.
                 ನೀವೇ ಇದನ್ನು ಅಪ್ಪನಿಗೆ  ಕೊಟ್ಟು ಬಿಡಿ ಅವರಿಗೆ ಹಣ ಕೊಡುವಷ್ಟು ಯಾವ ಅರ್ಹತೆಯೂ ನನಗಿಲ್ಲ. ನೀವು ಕೊಡಿ,ನಾನು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವೆ' ಎಂದನು. ತಾಯಿಗೆ ದಿಗ್ಭ್ರಮೆಯಾಯಿತು, ಮೂಖ ಸ್ತಂಭೂತಳಾಗಿ ನಿಂತು ಬಿಟ್ಟಳು.

      ಕೊಠಡಿಯ ಒಳಗೆ ಕುಳಿತು ತಾಯಿ-ಮಗನ ಸಂಭಾಷಣೆಯನ್ನು ಕೇಳಿಸಿ ಕೊಳ್ಳತ್ತಿದ ತಂದೆ,ತಕ್ಷಣ ಹೊರಬಂದು ತನ್ಮ ಮಗನನ್ನು ನೋಡಿದ ತಕ್ಷಣವೇ ಕಣ್ಣಲ್ಲಿ ನೀರು ತುಂಬಿ ಬಂತು ಅದು ಆನಂದ ಭಾಷ್ಬ. ತನ್ನ ಎರಡು ಬಾಹುಗಳಿಂದ ಮಗನಿಗೆ ಬಿಗಿಯಾದ ದೀರ್ಘಾಲಿಂಗನ ಮಾಡಿದನು. ತನ್ನ ಮಗ ತನ್ನನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವನಲ್ಲ ಎಂದು ಹೆಮ್ಮೆಯಿಂದ ಮಗನ ಕಣ್ಣಿನೊಳಗೆ ತನ್ನ ಬಿಂಬವನ್ನು ನೋಡಿ ಪುಳಕಿತನಾದನು, ಮನದಲ್ಲಿ ಹೆಮ್ಮೆಯ ಸಾರ್ಥಕ ಭಾವ ತುಂಬಿ ಬಂದಿತು. ಮೈ ಮನಸ್ಸು ಹಗುರವಾಗಿ ಗಾಳಿಯಲ್ಲಿ ತೇಲಿದ ಅನುಭವ ಕೈಯಲ್ಲಿ ಮೋಡ ಹಿಡಿದ ಅನುಭವ ಆ ತಂದೆಗೆ ತಕ್ಕ ಮಗ ಎಂಬ ಸಾರ್ಥಕ ಭಾವನೆ ...

!!! "ಸಾರ್ಥಕ ಬದುಕು ಬದುಕಿದ್ದಾಗಲೇ ನಮ್ಮ ಜೀವನಕ್ಕೆ ಒಂದು ಅರ್ಥ ಸಿಗುವುದು" !!!

🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤🖤
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಸ್ಸೆಗಳಿದ್ದರೆ , ನೇರವಾಗಿ ವಿಚಾರಿಸಿ, ಸಲಹೆಗಳು ನೀಡಿ.

FlipKart ಕಂಪನಿ- ಭಾರತೀಯ ಇ-ಕಾಮರ್ಸ್ ಉದ್ಯಮದಲ್ಲಿ 48% ಮಾರುಕಟ್ಟೆಯೇ ಪಾಲುದಾರ- "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್"

           "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್   ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್ * ಸ್ಥಾಪಕರು : ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್  (...