" ಹಣದ ಜೊತೆಗಿನ ಸಂಬಂಧ"
ಯಾವುದೇ ಮಹಾನ್ ವ್ಯಕ್ತಿಗಳನ್ನು ಅನುಸರಿಸಿ ಆದರೆ ಅವರನ್ನು ಅನುಕರಣೆ ಮಾಡಿ ಆದರೆ ನಮ್ಮ ಸೈದಾಂತಿಕ ಸಿದ್ಧಾಂತಗಳನ್ನು ಯಾವತ್ತೂ ಮರೆಯಬೇಡಿ, ನಿಮ್ಮ ನಿರ್ಧಾರವನ್ನು ನೀವು ಯಾವತ್ತೂ ಕೈ ಬಿಡಬೇಡಿ, ನಿಮ್ಮ ದಾರಿದ್ರ್ಯವನ್ನು ನೀವು ಹೋಗಲಾಡಿಸಬೇಕಾದರೆ ನೀವು ಶ್ರಮ ಪಡಬೇಕು, ನಿಮ್ಮ ಯೋಚನಾ ಶಕ್ತಿ ದೃಢವಾಗಿರಬೇಕು.
ಯಾವುದೇ ಆಶಾ ಆಕಾಂಕ್ಷೆಗಳಿಗೆ ಒಳಗಾಗಬಾರದು, ಸಂಪಾದನೆ ಕಡೆ ಗಮನ ಕೊಡಬೇಕು, ಸಂಪಾದನೆ ಮರೆಯಬಾರದು, ಸಂಪಾದನೆಯಿಂದ ಯಾರಿಗೆ ದುರಹಂಕಾರ ಬರುವುದು ಅವರು ನಾಶವಾಗುವುದು ನೂರಕ್ಕೆ ನೂರರಷ್ಟು ಸತ್ಯ, ಹೀಗಾಗಿ ಯಾವುದೇ ಒಬ್ಬ ವ್ಯಕ್ತಿ ದಾರಿದ್ರವನ್ನು ಹುಡುಕಿಕೊಂಡು ಹೋಗೋದು ಅವಶ್ಯಕತೆ ಇಲ್ಲ ಅದಾಗೇ ಬಂದುಬಿಡುತ್ತದೆ ಯಾಕೆಂದರೆ ಆ ದಾರಿದ್ರೆ ಅನ್ನೋದು ಮನುಷ್ಯನ ದುರಹಂಕಾರವನ್ನು ಅಡಗಿಸಲು ಇರುವ ಒಂದು ಬ್ರಹ್ಮಾಸ್ತ್ರ.
ಈಗ ಯಾವುದೇ ಒಬ್ಬ ವ್ಯಕ್ತಿ ತನ್ನ ಸಂಪಾದನೆ ಬಹಳ ಇರಬೇಕಾದರೆ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಅದನ್ನು ಹೊರತುಪಡಿಸಿ ದುರಹಂಕಾರದಿಂದ ವರ್ತಿಸಿದರೆ "ನಾ" ಎಂಬ "ಅಹಂ", ಮನುಷ್ಯನ ಜೀವನವೇ ಕೊನೆಗೊಳಿಸುತ್ತದೆ. ಹೀಗಾಗಿ ನಾ ಅನ್ನೋದು ಯಾವ ಕಾರಣಕ್ಕೂ ಬರಬಾರದುದು ಅದರಿಂದಾಗಿ ಸಂಪಾದನೆ ಕಡೆ ಗಮನ ಕೊಡಬೇಕು ನಾಲ್ಕು ಜನರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು .
हम किसके लिए जीना है! हम नाम ऑफ निशान के लिए देना है!!
ಜೊತೆಗೆ ವ್ಯವಹಾರದಲ್ಲಿ ಉತ್ತುಂಗ ಕೇರಿ ಇಡೀ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳಲ್ಲಿ ನಾವು ಪಾಲ್ಗೊಂಡು, ಆ ಸಮಸ್ಯೆನ ಬಗೆಹರಿಸುವಲ್ಲಿ ಪಾತ್ರರಾಗಬೇಕು ಅದರ ಜೊತೆಗೆ ಸ್ವಲ್ಪ ಆದರೂ ಕೂಡಿಟ್ಟ ಸಂಪಾದನೆಯಲ್ಲಿ ಬಡವರಿಗೆ ದಾನದ ರೂಪದಲ್ಲಿ ಸಹಕಾರ ನೀಡಬೇಕು ಅದರಿಂದ ಅವರ ವ್ಯಕ್ತಿತ್ವವು ತುಂಬಾ ಬೆಳೆಯುತ್ತದೆ ಅದರ ಜೊತೆಗೆ ಅವರಲ್ಲಿ ಇರುವಂತಹ ದಾರಿದ್ರ್ಯವನ್ನು ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ. ಅದರಿಂದ ಲಕ್ಷ್ಮಿ ತಾಂಡವಾಡುತ್ತಾಳೆ.
ಲಕ್ಷ್ಮಿ ಕಟಾಕ್ಷ ಆಗಬೇಕೆಂದರೆ ಮೊದಲು ಈ ಶ್ರೀ ಮಹಾಲಕ್ಷ್ಮಿ ಮಂತ್ರ -"ಶ್ರೀಂ" ಪ್ರತಿದಿನ ಜಪಿಸಬೇಕು. ಅದರ ಜೊತೆಗೆ ಹಣಕಾಸಿನ ಬಗ್ಗೆ ಉತ್ತಮ ಸಂಸ್ಕಾರ ಹೊಂದಿರಬೇಕು. ಧರ್ಮದ ಮೂಲಕ ದಾರಿದ್ರ್ಯ ಹೋಗಲಾಡಿಸಬೇಕು, ಬೇರೆಯವರ ದಾರಿದ್ರ್ಯವನ್ನು ಗೊತ್ತು -ಗೊತಿಲ್ಲದೆ ಬಂದರೆ ಅದನ್ನು ಬೇಗ ಗುರುತಿಸಿ ಪರಿಹಾರ ಕಂಡುಕೊಳ್ಳಬೇಕು. ನಾವು ಆ ದಾರಿದ್ರ್ಯವನ್ನು ನಮ್ಮ ಜೊತೆ ಮುಂದುವರಿದ ಹೋಗಬಾರದು. "ಶುಭಾ ಮಸ್ತು ".
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಮಸ್ಸೆಗಳಿದ್ದರೆ , ನೇರವಾಗಿ ವಿಚಾರಿಸಿ, ಸಲಹೆಗಳು ನೀಡಿ.