"ಸಮಸ್ಸೆಯು ಜೀವನಕ್ಕೆ ಮುಳ್ಳಾದಗ ಅದಕ್ಕೆ ಪರಿಹಾರವು ಕೊಡ ದೊಡ್ಡದಾಗಿರುತ್ತದೆ ಆಗ ಯಶಸ್ಸು,ಕೀರ್ತಿ, ಸಂಪಾದನೆ ಎಲ್ಲಾವು ದೊರೆಯುತ್ತದೆ"
"ಶ್ರಮ ಪಟ್ಟು ಕೆಲಸ ಮಾಡು, ಬುದ್ದಿವಂತಿಕೆಯಿಂದ ಹೆಜ್ಜೆ ಹಾಕು, ಹಂತ ಹಂತವಾಗಿ ಇರುವು ಎಲ್ಲಾ ಸಮಸ್ಸೆಗಳಿಗೆ ಪರಿಹಾರ ಸಿಕ್ಕೆ ಸಿಗುತ್ತದೆ ಆ ಸಮಯ ಸಲುವಾಗಿ ಕಾಯಬೇಕು, ಕಾಯದಾಗಲೇ ನಮಗೆ ಯಶಸ್ಸು ದೊರೆಯುತ್ತದೆ". ಯಾವುದೇ ಶ್ರಮಕ್ಕೆ ಬೆಲೆ ಬರಬೇಕಾದರೆ ಅದರಿಂದ ಪಟ್ಟಿರುವು ಕಷ್ಟಕ್ಕೆ ವಿನಃ , ಸುಖವಾಗಿ ಇದ್ದಾಗ ಅದರ ಬೆಲೆ ನಮಗೆ ಗೊತ್ತಾಗವುದಿಲ್ಲ ಹೀಗಾಗಿ ಯಾವುದೇ ಆಗಲಿ ನಾವು ಸಂತೋಷದಿಂದ ಸ್ವೀಕರಿಸಬೇಕು, ಅದನ್ನು ಬಿಟ್ಟು ಯಾವುದೇ ತಪ್ಪು ನಿರ್ಧಾರಗಳು ತೆಗೆದುಕೊಳ್ಳಬಾರದು...
ನ್ಯಾಯುತವಾಗಿ ಸಂಪಾದನೆ ಮಾಡಿ ನಮಗೆ ಆಗಿರುವ ಸಮಸ್ಸೆಗಳನ್ನು ಪರಿಹಾರ ಮಾಡಿಕೊಳ್ಳಬೇಕು, ಜೀವನದಲ್ಲಿ ಯಶಸ್ಸು ಹಾಗೆ ಬರುವುದಿಲ್ಲ ಅದರ ಸಲುವಾಗಿ ಹಗಲು-ಇರುಳು ಶ್ರಮ ಪಡಬೇಕಾಗುತ್ತದೆ, ಪ್ರತಿ ನಿತ್ಯ ಯೋಚನೆ ಮಾಡಿ ಕಾರ್ಯನಿರ್ವಹಿಸಬೇಕು. ಪ್ರತಿಯೊಂದ ಕೆಲಸಕ್ಕೆ ಯೋಜನೆ ಹಾಕಿಕೊಂಡು ಕೆಲಸ ಮಾಡಿದಾಗ ಮಾತ್ರ ನಮಗೆ ಅದರಲ್ಲಿ ಯಶಸ್ಸು ಸಿಗುತ್ತದೆ. ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಪ್ರತಿನಿತ್ಯ ಅದರ ಬಗ್ಗೆ ಮೌಲ್ಯಮಾಪನ ಮಾಡಬೇಕು ಹಾಗೆ ಒಳ್ಳೆಯ ಸಂಬಂಧಗಳು ಕೊಡ ಉಳಿಸಿಕೋಳ್ಳಬೇಕು ಯಾವುದೇ ಸಮಯದಲ್ಲಿ ಅದು ಉಪಯೋಗಕ್ಕೆ ಬರುತ್ತದೆ.
ಯಾವುದೇ ಸಮಸ್ಯೆಗೆ ಅಷ್ಟು ಬೇಗ ಪರಿಹಾರ ಸಿಗುವುದಿಲ್ಲ , ಅದನ್ನು ಸರಿಪಡಿಸಿಕೊಳ್ಳಲು ಕಾಲ ಅವಕಾಶ ಬೇಕಾಗುತ್ತದೆ, ಅದಕ್ಕೆ ಸರಿಯಾದ ಪರಿಹಾರ ಹುಡುಕಿ ಆದಷ್ಟು ಬೇಗ ಸರಿ ಮಾಡಿಕೊಳ್ಳಬೇಕು. "ಪ್ರಯತ್ನಕ್ಕೆ ಫಲ ನೀಡದೆ ಇದ್ದಾಗಲೂ ಕೊಡ ಸೋಲನ್ನು ಒಪ್ಪಿಕೊಳ್ಳಬಾರದು, ಯಾಕೆಂದರೆ ನಮ್ಮ ಆತ್ಮ ವಿಶ್ವಾಸ ಎಲ್ಲಾ ಕಳೆದು ಕೊಂಡಂತೆ ಲೆಕ್ಕ, ಹೀಗಾಗಿ ಎಂದು ಆ ವಿಶ್ವಾಸ ಕಳೆದುಕೊಳ್ಳಬಾರದು".
ನಿಮ್ಮ ಪ್ರಾಮಾಣಿಕ ಪ್ರಯತ್ನ ಮಾಡುವುದರ ಮೂಲಕ ಇತಿಹಾಸ ನಿರ್ಮಿಸಬೇಕು, ನೀವು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿದ್ದರು ಅದಕ್ಕೆ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಬೇಕು ಇದರಿಂದ "ಯಶಸ್ಸು ಗ್ಯಾರಂಟಿ ".
////////////////********************+++++++****++++++***********///////////////////.....------.....------!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಮಸ್ಸೆಗಳಿದ್ದರೆ , ನೇರವಾಗಿ ವಿಚಾರಿಸಿ, ಸಲಹೆಗಳು ನೀಡಿ.